ಸುನೀಲ್ ಬೋಸ್ ವಿರುದ್ಧ ಗೋ ಬ್ಯಾಕ್ ಪೋಸ್ಟರ್: ತಲೆ ಕೆಟ್ಟವರು ಮಾಡಿರುವ ಪಿತೂರಿ- ಸಚಿವ ಹೆಚ್.ಸಿ ಮಹದೇವಪ್ಪ.

ಚಾಮರಾಜನಗರ,ಏಪ್ರಿಲ್,3, 2024 (www.justkannada.in): ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ವಿರುದ್ಧ ಗೋ ಬ್ಯಾಕ್ ಪೋಸ್ಟರ್ ಅಂಟಿಸಿದ ವಿಚಾರಕ್ಕೆ ಸಂಬಂಧಿಸಿಂತೆ ಪ್ರತಿಕ್ರಿಯಿಸಿರುವ ಸಚಿವ ಹೆಚ್.ಸಿ ಮಹದೇವಪ್ಪ, ಇದು ತಲೆ ಕೆಟ್ಟವರು ಮಾಡಿರುವ ಪಿತೂರಿ ಎಂದು ಕಿಡಿಕಾರಿದ್ದಾರೆ.

ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಯಾಗಿ ಪುತ್ರ ಸುನೀಲ್ ಬೋಸ್ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, 8 ವಿಧಾನಸಭಾ ಕ್ಷೇತ್ರದ ಜನರು ಎಲ್ಲರೂ ಭಾಗಿಯಾಗಿದ್ದಾರೆ. ಸಿಎಂ ಸೇರಿ ರಾಜ್ಯದ ಪ್ರಮುಖ ನಾಯಕರು ಬಂದು ಬೆಂಬಲಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಉತ್ಸುಕ ಅಲೆ ಇದೆ ಎಂದರು.

ಗೋ ಬ್ಯಾಕ್ ಪೋಸ್ಟರ್ ವಿಚಾರ. ಯಾರೋ ಒಬ್ಬ ತಲೆ ಕೆಟ್ಟವನು ಮಾಡಿರೋ ಪಿತೂರಿ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳೋ ಅವಶ್ಯಕತೆಯೇ ಬರೋದಿಲ್ಲ. 8 ವಿಧಾನಸಭಾ ಕ್ಷೇತ್ರಗಳಲ್ಲೂ ಸಭೆ ನಡೆಸಿದ್ದೇವೆ.  ಉತ್ತಮ ಸ್ಪಂದನೆ ಸಿಕ್ಕಿದೆ. ಯಾರೋ ಒಬ್ಬ ಗೋ ಬ್ಯಾಕ್ ಅಂತಾ ಹೇಳಿದ ತಕ್ಷಣ ಸುನೀಲ್ ಬೋಸ್ ನಾ ವಿರೋಧಿಸಲು ಸಾಧ್ಯವಿಲ್ಲ ಎಂದು ಹೆಚ್.ಸಿ ಮಹದೇವಪ್ಪ ತಿಳಿಸಿದರು.

ಒಂದು ನಾಲ್ಕು ಜನ ಹೇಳಿದ್ರೆ ಅದಕ್ಕೆ ಬೆಲೆ ಇರೋಲ್ಲ- ಸಚಿವ ಸತೀಶ್ ಜಾರಕಿಹೊಳಿ

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಸಾವಿರಾರು ಜನ ನಾಮಪತ್ರ ಸಲ್ಲಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದರು.  ಗೋ ಬ್ಯಾಕ್ ಸುನೀಲ್ ಬೋಸ್ ಪೋಸ್ಟರ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಒಂದು ನಾಲ್ಕು ಜನ ಹೇಳಿದ್ರೆ ಅದಕ್ಕೆ ಬೆಲೆ ಇರೋಲ್ಲ. ನಮ್ಮವರು ಮಾಡಿದ್ರೂ ಅದು ಅವರ ವೈಯಕ್ತಿಕ ವಿಚಾರ. ಸಿದ್ದರಾಮಯ್ಯ ಅವರ ಹೆಸರು ಹೇಳಿಕೊಂಡು ಮತ ನೀಡುತ್ತಿದ್ದಾರೆ. ಹಾಗಾಗಿ ವರುಣಾದಲ್ಲಿ ಅತಿ ಹೆಚ್ಚಿನ ಮತ ನೀಡುವಂತೆ ಕೇಳಿದ್ದರಲ್ಲಿ ತಪ್ಪೇನಲ್ಲ. ಸಿದ್ದರಾಮಯ್ಯ ಅವರಿಂದ ಇಡಿ ರಾಜ್ಯ ಗೆಲ್ಲುತ್ತಾ ಇರೋದು. ಗ್ಯಾರಂಟಿ ಯೋಜನೆಗಳಿಗೆ ಸಿದ್ದರಾಮಯ್ಯನವರೇ ಗ್ಯಾರಂಟಿ. 6 ತಿಂಗಳು ಗ್ಯಾರಂಟಿ ಕೊಟ್ಟಿದ್ದೀವಿ ಮುಂದೇನು ಕೂಡ ಕೊಡುತ್ತೇವೆ ಎಂದರು.

Key words: congress, Sunil Bose, HC Mahadevappa.