Saturday, September 26, 2026

BDA Apartments

ಬಿಎಸ್ ಎನ್ ಎಲ್ ನೌಕರರು ದೇಶದ್ರೋಹಿಗಳು ಎಂಬ ಹೇಳಿಕೆ ನೀಡಿದ್ದ ಸಂಸದ ಅನಂತಕುಮ...
Home Front Page ಬಿಎಸ್ ಎನ್ ಎಲ್ ನೌಕರರು ದೇಶದ್ರೋಹಿಗಳು ಎಂಬ ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ್ ಹೆಗಡೆ ವಿರುದ್ದ...

ಬಿಎಸ್ ಎನ್ ಎಲ್ ನೌಕರರು ದೇಶದ್ರೋಹಿಗಳು ಎಂಬ ಹೇಳಿಕೆ ನೀಡಿದ್ದ ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆಕ್ರೋಶ…

ಮೈಸೂರು,ಆ,14,2020(www.justkannada.in):  ಬಿಎಸ್ಎನ್ಎಲ್ ನೌಕರರು ದೇಶದ್ರೋಹಿಗಳು ಎಂಬ ಹೇಳಿಕೆ ನೀಡಿರುವ ಸಂಸದ ಅನಂತಕುಮಾರ್ ಹೆಗಡೆ ವಿರುದ್ದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಕಿಡಿಕಾರಿದ್ದಾರೆ.jk-logo-justkannada-logo

ಇಂದು ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಬಿಎಸ್ ಎನ್ ಎಲ್ ಕಂಪನಿ ಕಾಂಗ್ರೆಸ್ ಪಕ್ಷದ ಅಧಿಕಾರವಧಿಯಲ್ಲಿ ಲಾಭದಲ್ಲಿ ನಡೆಯುತ್ತಿತ್ತು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಬಿಎಸ್ಎನ್ಎಲ್ ನಷ್ಟದ ಹಾದಿ ಹಿಡಿದಿದೆ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಸುಮಾರು 30 ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗೀಕರಣ ಮಾಡಿದ್ದಾರೆ. ಜಿಯೋ ಕಂಪನಿ ಲಾಭಕ್ಕಾಗಿ ಬಿಎಸ್ಎನ್ಎಲ್ ಅನ್ನು ಬಲಿ ಕೊಡಲಾಯಿತು. ನಿಜವಾದ ದೇಶದ್ರೋಹಿಗಳು ಬಿಜೆಪಿಯವರು ಎಂದು ಅನಂತಕುಮಾರ್ ಹೆಗಡೆಯವರ ಹೇಳಿಕೆ ವಿರುದ್ದ ಕಿಡಿಕಾರಿದರು.mysore-kpcc-spokesperson-m-laxman-bsnl-mp-ananthakumar-hegde

ಕಳೆದ ಎರಡು ದಿನದ ಹಿಂದೆ ಸಂಸದ ಅನಂತಕುಮಾರ್ ಹೆಗಡೆ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುವಾಗ ಬಿಎಸ್.ಎನ್.ಎಲ್ ನೌಕರರ ವಿರುದ್ದ ಹರಿಹಾಯ್ದಿದ್ದರು. ಬಿ.ಎಸ್.ಎನ್‌.ಎಲ್. ನೌಕರರು ದೇಶದ್ರೋಹಿಗಳು ಎಂದು ಹೇಳುವ ಮೂಲಕ ವಿವಾದ ಸೃಷ್ಟಿ ಮಾಡಿದ್ದರು.

Key words: mysore-KPCC spokesperson -M. Laxman – BSNL- MP Ananthakumar Hegde