Sunday, August 23, 2026

BDA Apartments

Home Front Page ಠಾಣೆಯಲ್ಲೇ ಸಾರ್ವಜನಿಕರೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಿದ ಪೊಲೀಸ್ ಸಿಬ್ಬಂದಿ…

ಠಾಣೆಯಲ್ಲೇ ಸಾರ್ವಜನಿಕರೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಿದ ಪೊಲೀಸ್ ಸಿಬ್ಬಂದಿ…

ಮೈಸೂರು,ಆ,11,2020(www.justkannada.in):  ಇಂದು ಶ್ರಿಕೃಷ್ಣ ಜನ್ಮಾಷ್ಠಮಿ  ಹಿನ್ನೆಲೆ, ಮೈಸೂರು ನಗರದಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಅಂತೆಯೇ ನಗರದ ಕೆ.ಆರ್ ಪೊಲೀಸ್ ಠಾಣೆಯಲ್ಲಿ ಸಿಬ್ಬಂದಿಗಳು ವಿಶೇಷವಾಗಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಿದರು.jk-logo-justkannada-logo

ಮೈಸೂರಿನ ವಿವಿಧೆಡೆ ಶ್ರೀ ಕೃಷ್ಣನ ಆರಾಧನೆ ನಡೆಯಿತು. ಹಾಗೆಯೇ ಕೆ.ಆರ್ ಪೊಲೀಸ್ ಠಾಣೆಯಲ್ಲೂ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಿದರು.  ತಳಿರು ತೋರಣಗಳಿಂದ ಕೆ.ಆರ್.ಠಾಣೆಯ ಒಳಗಡೆಯಿರುವ ಶ್ರೀಕೃಷ್ಣ ವಿಗ್ರಹಕ್ಕೆ ಅಲಂಕಾರ ಮಾಡಲಾಗಿತ್ತು. ಠಾಣೆಯ ಸಿಬ್ಬಂದಿಯಿಂದ ಶ್ರೀಕೃಷ್ಣನಿಗೆ ಸಿಂಗಾರ ಮಾಡಿದರು. ವಿಗ್ರಹದ ಮುಂದೆ ಮಹಿಳಾ ಸಿಬ್ಬಂದಿ ವಿಗ್ರಹದ ಮುಂದೆ ರಂಗೋಲಿ ಬಿಡಿಸಿ ಬಣ್ಣ ಹಾಕಿದ್ದರು.mysore-k-r-police-station-srikrishna-janmastami

ಠಾಣೆಯ ಸಿಬ್ಬಂದಿ ಸಾರ್ವಜನಿಕರೊಂದಿಗೆ ಬೆರತು ಸಿಹಿಹಂಚಿ ವಿಶೇಷ ಪೂಜೆ ನೆರವೇರಿಸುವ ಮೂಲಕ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಿದರು.

Key words: mysore-k.r police station- srikrishna janmastami