ತೊಣಚಿಕೊಪ್ಪಲ್ ಬಡಾವಣೆ ಗಣೇಶ್ ಬಂಡಾರ್ ಬಳಿ ಸದರನ್ ಸ್ಟಾರ್ ಬಾಣಸಿಗರ ‘ಚೆಫ್ ದಿ ಕ್ಯೂಸಿನ್’ ಶೀಘ್ರ ಆರಂಭ

ಮೈಸೂರು, ಆಗಸ್ಟ್ 11, 2020 (www.justkannada.in): ತೊಣಚಿಕೊಪ್ಪಲ್ ಬಡಾವಣೆಯ ಗಣೇಶ್ ಬಂಡಾರ್ ಸಮೀಪ ‘ಚೆಫ್ ದಿ ಕ್ಯೂಸಿನ್’ ಹೋಟೆಲ್‌ ಆರಂಭವಾಗುತ್ತಿದ್ದು, ಸದರನ್ ಸ್ಟಾರ್‌ನಲ್ಲಿದ್ದ ಬಾಣಿಸಿಗರ ಕೈ ರುಚಿಯನ್ನು ಇಲ್ಲಿ ಸವಿಯಬಹುದಾಗಿದೆ.

4 ನೇ ಹಂತ, 13ನೇ ಮುಖ್ಯ ರಸ್ತೆ, ತೊಣಚಿಕೊಪ್ಪಲ್ ಬಡಾವಣೆ ಗಣೇಶ್ ಬಂಡಾರ್ ಸಮೀಪ ಈ ಹೋಟೆಲ್ ಆರಂಭವಾಗುತ್ತಿದ್ದು, ಇಡ್ಲಿ, ವಡೆ, ಬಾತ್, ಪೂರಿಯಂತಹ ಸಾಮಾನ್ಯ ತಿಂಡಿ ತಿನಿಸುಗಳಲ್ಲದೆ ವಿಶೇಷ ಇಂಡೋ-ಕೊಲ್ಕೊತ್ತ ಚೈನೀಸ್ ಶೈಲಿಯ ಸಸ್ಯಹಾರಗಳು ಇಲ್ಲಿ ಲಭ್ಯವಿವೆ.

ಬೋಗಾದಿ ರಾಜಣ್ಣ(ಬಿ.ಕೆ. ರಾಜು) ಅವರ ನೇತೃತ್ವದಲ್ಲಿ ಕಾರಿಯಪ್ಪ, ಶಿವಮೂರ್ತಿ, ಉತ್ತಮ್ ಸೇರಿದಂತೆ ಹಲವು ಮಂದಿ ಗೆಳೆಯರ ತಂಡವು, ಈ ವಿಶೇಷ ಹೋಟೆಲ್ ಮುಖಾಂತರ ಜನರಿಗೆ ಅತ್ಯುತ್ತಮ ಆಹಾರವನ್ನು ಸಾಮಾನ್ಯರ ಕೈಗೆಟಕುವ ದರದಲ್ಲಿ ನೀಡಲು ಸಿದ್ದವಾಗಿದೆ.

ಇಂಡೋ-ಕೊಲ್ಕೊತ್ತ ಚೈನೀಸ್ ಶೈಲಿಯ ಆಹಾರವನ್ನು ಉಣಬಡಿಸಬೇಕು ಮಹದಾಸೆಯೊಂದಿಗೆ ‘ಚೆಫ್ ದಿ ಕ್ಯೂಸಿನ್’ ಎಂಬ ಹೆಸರಿನಲ್ಲಿ ಈ ಹೋಟೆಲ್ ನಾಗರಿಕರ ಸೇವೆಗೆ ತೆರೆದುಕೊಳ್ಳುತ್ತಿದೆ. ಸದರನ್‌ಸ್ಟಾರ್‌ನ ದಯಾನಿಧಿ ಶರ್ಮಾ ಅವರ ಕೈ ಚಳಕದಲ್ಲಿ ತಯಾರಾಗುವ ಕೋಳಿ ಮೊಟ್ಟೆ ಬಳಕೆ ಮಾಡದ ಬಗೆ ಬಗೆಯ ಕೇಕ್‌ಗಳು, ಮನಸೂರೆಗೊಳ್ಳುವ ಬಣ್ಣ ಬಣ್ಣದ ಸುಪ್ರಸಿದ್ದ ಪೇಸ್ಟ್ರಿಗಳು ಕೂಡ ಇಲ್ಲಿ ದೊರೆಯಲಿವೆ. ವೆಜ್ ಮೊಮೊ, ಪನೀರ್ ಚೀಸ್ ಮೊಮೊ, ಕಾರ್ನ್ ಸಾಲ್ಟ್ ಅಂಡ್ ಪೆಪ್ಪರ್ ಇದಲ್ಲದೆ ಇಂಡೋ ಕೋಲ್ಕೊತ್ತ ಶೈಲಿಯ ಆಹಾರ ಇಲ್ಲಿನ ಸ್ಪೆಷಲ್ ಮೆನು ಎನ್ನುತ್ತಾರೆ ಉದ್ಯಮಿ ಬೋಗಾದಿ ರಾಜಣ್ಣ(ಬಿ.ಕೆ. ರಾಜು).