ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ಸಿದ್ಧಪಡಿಸಿರುವ ‘ಸಮಗ್ರ ಕನ್ನಡ ವ್ಯಾಕರಣ’ ಪುಸ್ತಕ ಬಿಡುಗಡೆ ಅ.24 ಕ್ಕೆ .

 

ಮೈಸೂರು, ಅ.22, 2020 : (www.justkannada.in news ) ನಗರದ ಜ್ಞಾನಬುತ್ತಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಅ. 24 ರಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿಯೇ ಸಿದ್ಧಪಡಿಸಿರುವ ‘ಸಮಗ್ರ ಕನ್ನಡ ವ್ಯಾಕರಣ’ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಂದು ಸಂಜೆ 6 ಗಂಟೆಗೆ ಲಕ್ಷಿಪುರಂ ಸರ್ಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಕನ್ನಡ ಉಪನ್ಯಾಸಕ ಡಾ. ಎಸ್. ನಾಗಾಚಾರಿ ಅವರು ಈ ಪುಸ್ತಕದ ಕತೃ. ಈ ಪುಸ್ತಕವನ್ನು ಅಬಕಾರಿ ಇಲಾಖೆ ಉಪ ಆಯುಕ್ತ ಡಾ. ಮಹಾದೇವಿ ಬಾಯಿ ಬಿಡುಗಡೆ ಮಾಡುವರು. ಪುಸ್ತಕ ಕುರಿತು ಬೆಂಗಳೂರಿನ ಅಕ್ಕ ಐಎಎಸ್  ಅಕಾಡಮಿಯ ನಿರ್ದೇಶಕ ಡಾ. ಶಿವಕುಮಾರ್ ಮಾತನಾಡುವರು,

mysore-jnanabuthi-book-release-mysore

ಸಮಾರಂಭದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರುಕಟ್ಟೆ ನಿಗಮದ ನಿರ್ದೇಶಕ ಶಂಕರೇಗೌಡ ವಹಿಸುವರು. ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾಯಣಗೌಡ ಉಪಸ್ಥಿತರಿರುವರು ಎಂದು ಜ್ಞಾನಬುತ್ತಿ ಸಂಸ್ಥೆಯ ಕಾರ್ಯದರ್ಶಿ ಹಚ್, ಬಾಲಕೃಷ್ಣ ತಿಳಿಸಿದ್ದಾರೆ.

key words : mysore-jnanabuthi-book-release-mysore