ತಮಿಳುನಾಡಿನ ಎಲ್ಲರಿಗೂ ಉಚಿತ ಕೋವಿಡ್ ಲಸಿಕೆ ನೀಡಲಾಗುವುದು- ಸಿಎಂ ಪಳನಿಸ್ವಾಮಿ ಘೋಷಣೆ…

ತಮಿಳುನಾಡು,ಅಕ್ಟೋಬರ್,22,2020(www.justkannada.in): ಕೊರೋನಾ ಲಸಿಕೆ ಬಳಕೆಗೆ ಸಿಕ್ಕ ಬಳಿಕ ತಮಿಳುನಾಡಿನ ಪ್ರತಿಯೊಬ್ಬರಿಗೂ ಕೊರೋನ ಲಸಿಕೆಯನ್ನು ಉಚಿತವಾಗಿ ನೀಡುತ್ತೇವೆ  ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ  ಘೋಷಣೆ ಮಾಡಿದ್ದಾರೆ.jk-logo-justkannada-logo

ಪುದುಕ್ಕೊಟ್ಟೈನಲ್ಲಿ  ಇಂದು ಮಾತನಾಡಿರುವ ತಮಿಳುನಾಡು ಸಿಎಂ ಪಳನಿಸ್ವಾಮಿ, ಕೊರೋನಾ ಲಸಿಕೆ ಬಳಕೆಗೆ ಸಿಕ್ಕ ಬಳಿಕ, ತಮಿಳುನಾಡು ಸರ್ಕಾರವು ಸಾರ್ವಜನಿಕರಿಗೆ ಉಚಿತವಾಗಿ ಲಸಿಕೆ ನೀಡುತ್ತದೆ ಎಂದು ಹೇಳಿದ್ದಾರೆ. ಮುಂದಿನ ವರ್ಷ ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಹೀಗಾಗಿ ರಾಜ್ಯ ಸರ್ಕಾರದಿಂದಲೇ ಕೊರೋನಾ ಲಸಿಕೆ ಹಣ ಭರಿಸುವುದಾಗಿ ಸಿಎಂ ಪಳಿನಿಸ್ವಾಮಿ ಘೋಷಿಸಿದ್ದಾರೆ ಎನ್ನಲಾಗಿದೆ.Free- Covid Vaccine - Everyone - Tamil Nadu-Declaration –tamilunadu CM Palaniswamy

ಇತ್ತೀಚೆಗಷ್ಟೇ ಬಿಹಾರ ಉಪ ಚುನಾವಣೆ ನಿಮಿತ್ತ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿರುವ ಬಿಜೆಪಿ, ತನ್ನ ಪ್ರಣಾಳಿಕೆಯಲ್ಲಿ ಉಚಿತ ಕೊರೋನಾ ಲಸಿಕೆ ನೀಡುವ ಕುರಿತು ಘೋಷಣೆ ಮಾಡಿತ್ತು. ಇದೀಗ ಬಿಹಾರ ಬೆನ್ನಲ್ಲೆ ತಮಿಳುನಾಡಿನಲ್ಲೂ ಕೊರೋನಾಗೆ ಉಚಿತ ಲಸಿಕೆ ನೀಡುವುದಾಗಿ ಸಿಎಂ ಪಳಿನಿಸ್ವಾಮಿ ಘೋಷಿಸಿದ್ದಾರೆ.

Key words: Free- Covid Vaccine – Everyone – Tamil Nadu-Declaration –tamilunadu CM Palaniswamy