ರಾಜ್ಯ ಬಿಜೆಪಿ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ- ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ….

ಬೆಂಗಳೂರು,ಅಕ್ಟೋಬರ್,22,2020(www.justkannada.in):  ಉತ್ತರ ಕರ್ನಾಟಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೆರೆಯಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ರಾಜ್ಯ ಬಿಜೆಪಿ ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.jk-logo-justkannada-logo

ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ರಾಜ್ಯದ ಜನರ ಸಮಸ್ಯೆಗೆ ಬಿಜೆಪಿ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಜತೆಗೆ ಕೊರೋನಾ ಪರಿಹಾರ ಯಾರಿಗೂ ಸಿಕ್ಕಿಲ್ಲ ಯಾರಿಗಾದರೂ ಕೊರೋನಾ ಪರಿಹಾರ ಸಿಕ್ಕಿದೆಯೇ..? ಇಲ್ಲ. ಈಗ ಉತ್ತರ ಕೊಡುವ ಕಾಲ ಬಂದಿದೆ. ರಾಜಕಾರಣ ಇಲ್ಲಿಗೆ ಮುಗಿದಿಲ್ಲ ಎಂದು ಹರಿಹಾಯ್ದರು.bjp-government-not-responding-people-kpcc-president-dk-shivakumar

ಈ ಸರ್ಕಾರ ಕೇವಲ ಘೋಷಣೆ ಆಶ್ವಾಸನೆಯನ್ನೇ ಮಾತ್ರ ನೀಡಿದೆ. ಆದರೆ ಅವುಗಳನ್ನ ಈಡೇರಿಸುವ ಭರವಸೆ ನೀಡಿಲ್ಲ. ಕೊರೋನಾ ಸಮಯದಲ್ಲಿ ನಾವು ಆಗ್ರಹ ಮಾಡಿದಾಗ ಒಂದಷ್ಟು ಪರಿಹಾರ ಘೋಷಣೆ ಮಾಡಿದರು. ಆದರೆ ಅದು ರೈತರಿಗೆ ಕಾರ್ಮಿಕರಿಗೆ ಶ್ರಮಿಕರಿಗೆ ತಲುಪಿಲ್ಲ ಎಂದು ಆರೋಪಿಸಿದರು.

Key words: BJP government –not- responding – people-KPCC President-DK Shivakumar