ನನಗಾಗಲಿ ಎಂಟಿಬಿಗಾಗಲಿ ನಿಗಮ ಮಂಡಳಿ ಸ್ಥಾನ ಬೇಡ- ಹುಣಸೂರಿನಲ್ಲಿ ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿಕೆ…

ಮೈಸೂರು,ಫೆ,9,2020(www.justkannada.in):  ನಾವು ಮಂತ್ರಿಗಳಾಗಿ ಕೆಲಸ ಮಾಡಿದವರು. ಹೀಗಾಗಿ ನನಗಾಗಲಿ ಎಂಟಿಬಿ ನಾಗರಾಜ್ ಗಾಗಲಿ ನಿಗಮ ಮಂಡಳಿ ಸ್ಥಾನ ಬೇಡ ಎಂದು ಮಾಜಿ ಸಚಿವ ಹೆಚ್.ವಿಶ್ವನಾಥ್ ಹೇಳಿದರು.

ಹುಣಸೂರಿನಲ್ಲಿ ನಗರ ಸಭೆ ಚುನಾವಣೆ ಮತದಾನದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ನಿಗಮ ಮಂಡಳಿ ಸ್ಥಾನವನ್ನ ಹೊಸಬರಿಗೆ ಅಥವಾ ಕಾರ್ಯಕರ್ತರಿಗೆ ಕೊಡಲಿ.   ನಾವು ಮಂತ್ರಿಗಳಾಗಿ ಕೆಲಸ ಮಾಡಿದವರು ಹೀಗಾಗಿ  ನಮಗೆ ನಿಗಮ ಮಂಡಳಿ ಬೇಡ. ಸಿಎಂ ಬಿಎಸ್ ವೈ ನಂಬಿದ್ದೇವೆ . ಅವರ ಮೇಲೆ ನಮಗೆ ಆಪಾರ ನಂಬಿಕೆ ಇದೆ ಎಂದರು.

ಹುಣಸೂರಿನಲ್ಲಿ‌ ಬಿಜೆಪಿ ಜೀರೊ ಇದೆ. ಇಲ್ಲಿ ನಾವು ಎಷ್ಟೇ ಗೆದ್ದರೂ ಸಾಧನೆಯೇ. ನಗರಸಭೆಯಲ್ಲಿ ಅಧಿಕಾರ ಹಿಡಿಯುವಷ್ಟು ಸ್ಥಾನಗಳನ್ನು ಪಡೆಯುವ ವಿಶ್ವಾಸ ಇದೆ ಎಂದು ಹೆಚ್.ವಿಶ್ವನಾಥ್ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಈ ಬಾರಿ ರಾಜ್ಯ ಬಜೆಟ್ ರೈತ ಪರವಾಗಿ ಇರಲಿದೆ. ವಿರೋಧ ಪಕ್ಷಗಳು ಎಲ್ಲವನ್ನೂ ವಿರೋಧಿಸುತ್ತಲೇ ಬರುತ್ತಿವೆ. ಆದರೆ ಯಡಿಯೂರಪ್ಪ ಕಳೆದ 15 ದಿನಗಳಿಂದ ಪ್ರಿ ಬಜೆಟ್ ಸಭೆಗಳನ್ನು ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದಲ್ಲಿ ಉತ್ತಮ ಅಧಿಕಾರಿಗಳು ಇದ್ದಾರೆ. ಯಡಿಯೂರಪ್ಪ ಅನುಭವಿಗಳಾಗಿದ್ದು ಉತ್ತಮ ಬಜೆಟ್ ಕೊಡುತ್ತಾರೆ. ಬಜೆಟ್ ಬಗ್ಗೆ ನನ್ನನ್ನು ಕೇಳಿದರೂ ಸಲಹೆಯನ್ನು ಕೊಡುತ್ತೇನೆ ಎಂದರು.

Key words: mysore-hunsur- former minister-H.Vishwanath- We- don’t want  corporation board.