ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಧನ್ಯವಾದ ಹೇಳಿದ ನೂತನ ಸಚಿವ ರಮೇಶ್ ಜಾರಕಿಹೊಳಿ….

ಬೆಳಗಾವಿ,ಫೆ,9,2020(www.justkannada.in):  ಮಾಜಿ ಸಚಿವ ಡಿ.ಕೆ ಶಿವಕುಮಾರ್ ಗೆ ನೂತನ ಸಚಿವ ರಮೇಶ್ ಜಾರಕಿಹೊಳಿ ಧನ್ಯವಾದ ತಿಳಿಸಿದ್ದಾರೆ. ಡಿ.ಕೆ ಶಿವಕುಮಾರ್ ನನ್ನನ್ನ ವಿರೋಧಿಸಿದ್ದಕ್ಕೆ ನಾನು ದೊಡ್ಡ ನಾಯಕನಾದೆ. ಹೀಗಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬೆಳಗಾವಿ ಗೋಕಾಕ್ ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಡಿಕೆ ಶಿವಕುಮಾರ್ ನನ್ನನ್ನ ವಿರೋಧಿಸಿದ್ದಕ್ಕೆ ನಾನು ದೊಡ್ಡ ನಾಯಕನಾದೆ. ಡಿ.ಕೆ ಶಿವಕುಮಾರ್ ಅಂದು ನನ್ನನ್ನ ಅಪ್ಪಿಕೊಂಡಿದ್ದರೇ ನಾನು ನಾಯಕನಾಗುತ್ತಿರಲಿಲ್ಲ. ಹೀಗಾಗಿ ಡಿ.ಕೆ ಶಿವಕುಮಾರ್ ಗೆ ಧನ್ಯವಾದ ಅರ್ಪಿಸುತ್ತೇನೆ. ಕಾಂಗ್ರೆಸ್ ನವರು ನನ್ನನ್ನ ನಿರ್ಲಕ್ಷಿಸಿದ್ದು ಒಳ್ಳೆಯದ್ದೇ ಆಯ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

14 ತಿಂಗಳ ಕಾಲ ನಮ್ಮನ್ನ ನೋಡಿ  ಅಪಹಾಸ್ಯ ಮಾಡಿದರು. ನಾವು 36 ಮಂದಿ ಇದ್ದವು. ಆದರೆ ಉಳಿದಿದ್ದು 17 ಮಂದಿ ಮಾತ್ರ. ಎಲ್ಲರೂ ಹಿಂದುಳಿದ ವರ್ಗದವರೇ. ನಾನು ಬಿಜೆಪಿಯಿಂದ ಸಚಿವನಾಗುತ್ತೇನೆ ಎಂದುಕೊಂಡಿರಲಿಲ್ಲ. ಯಶಸ್ಸು ಸಿಕ್ಕಿದೆ ಅಂತಾ ಸುಮ್ಮನಿದ್ರೆ ನಾವು ಮರ್ಖರಾಗ್ತೀವಿ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

Key words: Minister -Ramesh Jarakiholi- thanked- former Minister -DK Sivakumar.