ಬಜೆಟ್ ನಲ್ಲಿ ರೈತರ ಸುಸ್ತಿಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ತೀರ್ಮಾನ- ಸಿಎಂ ಬಿಎಸ್ ಯಡಿಯೂರಪ್ಪ ಹೇಳಿಕೆ…

ಹುಬ್ಬಳ್ಳಿ,ಫೆ,9,2020(www.justkannada.in):  ಬಜೆಟ್ ನಲ್ಲಿ ಸಹಕಾರ ಬ್ಯಾಂಕ್ ಗಳಲ್ಲಿನ ರೈತರ ಸುಸ್ತಿಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ತಿಳಿಸಿದರು.

ಹುಬ್ಬಳ್ಳಿ ಏರ್ ಪೋರ್ಟ್ ನಲ್ಲಿ ಇಂದು ಮಾಧ್ಯಮದ ಜತೆ ಮಾತನಾಡಿದ ಸಿಎಂ ಬಿಎಸ್ ಯಡಿಯೂರಪ್ಪ ರೈತರ ಸುಸ್ತಿಸಾಲದ ಬಡ್ಡಿ ಮನ್ನಾ ಮಾಡುವುದರಿಂದ ಸರ್ಕಾರದ ಮೇಲೆ 400 ಕೋಟಿ ಹೊರೆ ಬೀಳಲಿದೆ. ಇನ್ನು ಮಹದಾಯಿ ವಿವಾದ ವಿಚಾರವಾಗಿ ದೆಹಲಿಗೆ ಹೋಗಿ ಚರ್ಚಿಸುವೆ ಎಂದರು.

ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಿಎಸ್ ಯಡಿಯೂರಪ್ಪ, ಈಗಾಗಲೇ ನೂತನ ಸಚಿವರಿಗೆ ಖಾತೆ ಹಂಚಿಕೆ ಫೈನಲ್ ಮಾಡಿದ್ದೇನೆ. ನಾಳೆ ಬೆಳಿಗ್ಗೆ ನೂತನ ಸಚಿವರಿಗೆ ಜವಾಬ್ದಾರಿ ವಹಿಸುತ್ತೇನೆ ಎಂದು ತಿಳಿಸಿದರು. ಎಲ್ಲರಿಗೂ ಅನುಕೂಲವಾಗುವ ಬಜೆಟ್ ಮಂಡಿಸುತ್ತೇವೆ.  ವಿಜಯನಗರ ಜಿಲ್ಲೆ ಮಾಡುವ ಯೋಚನೆ ನಮ್ಮ ಮುಂದೆ ಇಲ್ಲ  ಎಂದು ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟನೆ ನೀಡಿದರು.

Key words: Decision – interest – farmer-loan- cm bs yeddyurappa