ಮೈಸೂರಿನ ಪಾರಂಪರಿಕ ಕಾಡಾ ಕಚೇರಿ ಕಟ್ಟಡಕ್ಕೆ ಧಕ್ಕೆ: ತಜ್ಞರಿಂದ ಆಕ್ರೋಶ.

ಮೈಸೂರು,ಜೂನ್,9,2023(www.justkannada.in): ಮೈಸೂರಿನ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಕಾಡಾ ಕಚೇರಿ ಕಟ್ಟಡ ನಿರ್ವಹಣೆ ವೇಳೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ವಿರುದ್ಧ ಪಾರಂಪರಿಕ ತಜ್ಞ ಪ್ರೊ. ರಂಗರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರೊ. ರಂಗರಾಜು,  ಪಾರಂಪರಿಕ ಕಟ್ಟಡಗಳ ರಕ್ಷಣೆಗಾಗಿ ಸರ್ಕಾರ ಹಣ ಬಿಡುಗಡೆ ಮಾಡಿತ್ತು. ಇದೇ ನಿಟ್ಟಿನಲ್ಲಿ ಆಯುರ್ವೇದ ಕಾಲೇಜಿನ ಕಟ್ಟಡವನ್ನು ಸೂಕ್ತ ರೀತಿಯಲ್ಲಿ ಪುನಃ ಸ್ಥಾಪನೆ ಮಾಡಲಾಗಿತ್ತು. ಆದರೆ  ಕಾಡಾ ಕಚೇರಿಯ ವಿಚಾರದಲ್ಲಿ ಅಧಿಕಾರಿಗಳು ಲೋಪ ಎಸಗಿದ್ದಾರೆ. ಪಾರಂಪರಿಕ ಕಟ್ಟಡಗಳು ನಿರ್ಮಾಣಕ್ಕೆ ಬೇಕಾದ ಗಾರೆ ಮಿಶ್ರಣದಲ್ಲಿ ಸಂಪೂರ್ಣ ಲೋಪ ಇದೆ. ಗಾರೆಗೆ ಬೇಕಾದ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಲ್ಲ. ಇದರ ಜೊತೆಗೆ ಕಟ್ಟಡಕ್ಕೂ ಸಹ ಧಕ್ಕೆ ತರುವಂತಹ ಕೆಲಸ ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಈಗಾಗಲೇ ಅಧಿಕಾರಿಗಳ ಗಮನಕ್ಕೆ ತಂದಿದ್ಧೇನೆ. ಅದನ್ನು ಸರಿ ಪಡಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದ್ರೂ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿದ್ದು ತಪ್ಪು. ಈಗಾಗಲೇ ತಜ್ಞರ ಸಮಿತಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ ಎಂದು  ಪಾರಂಪರಿಕ ತಜ್ಞ ಪ್ರೊ. ರಂಗರಾಜು ಹೇಳಿದರು.

Key words: Mysore- heritage- Kada office- building- threatened- Outrage – experts.