ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ಸಿಎಂ ಸೂಚಿಸಿದ್ದಾರೆ: ಕಂದಾಯ ಸಚಿವ ಕೃಷ್ಣಭೈರೇಗೌಡ.

ಬೆಂಗಳೂರು,ಜೂನ್,9,2023(www.justkannada.in): ಕಳೆದ 6 ತಿಂಗಳಲ್ಲಿ ಹಂಚಿಕೆ, ಮಂಜೂರಾದ ಭೂಮಿ ಪರಿಶೀಲನೆಗೆ ಮುಖ್ಯಮಂತ್ರಿ ಸಿದ‍್ಧರಾಮಯ್ಯ ಸೂಚಿಸಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ  ಕಂದಾಯ ಸಚಿವ ಕೃಷ್ಣಭೈರೇಗೌಡ, ಯಾರಿಗೆಲ್ಲ ಸರ್ಕಾರಿ ಭೂಮಿ ಹಂಚಿಕೆಯಾಗಿದೆ ಎಂದು ಪರಿಶೀಲನೆ ನಡೆಸಲು  ಸಿಎಂ ಸಿದ್ಧರಾಮಯ್ಯ ಸೂಚಿಸದ್ದಾರೆ. ಚಾಣಕ್ಯ ವಿಶ್ವವಿದ್ಯಾಲಯಕ್ಕೆ ಕೆಐಎಡಿಬಿಯಿಂದ ಜಮೀನು ನೀಡಿದ್ದಾರೆ. ತರಾತುರಿಯ ತೀರ್ಮಾನಗಳ ಬಗ್ಗೆ ಮರು ಪರಿಶೀಲನೆಗೆ ನಿರ್ಧರಿಸಿದ್ದೇವೆ ಎಂದು ಹೇಳಿದರು.

ಗೃಹಲಕ್ಷ್ಮಿ ಯೋಜನೆಯಡಿ ಫಲಾನುಭವಿಗಳಾಗಲು ಅರ್ಜಿಗಳನ್ನು ನಾಡ ಕಚೇರಿ, ಬಾಪೂಜೀ ಸೇವಾ ಕೇಂದ್ರ, ಬೆಂಗಳೂರು ಒನ್ ಕೇಂದ್ರ, ಡಿಜಿಟಲ್ ಸರ್ವಿಸ್ ಸೆಂಟರ್, ಸೇವಾ ಕೇಂದ್ರ ಮೊದಲಾದ ಕಡೆಗಳಲ್ಲಿ ಸಲ್ಲಿಸಬಹುದು. ಅದಕ್ಕೂ ಮುಖ್ಯವಾಗಿ ಸರ್ಕಾರದ ಇ-ಗವರ್ನೆನ್ಸ್ ಇಲಾಖೆ ಒಂದು ಆ್ಯಪ್ ಅನ್ನು ಕೆಲ ದಿನಗಳಲ್ಲಿ ಬಿಡುಗಡೆ ಮಾಡಲಿದ್ದು ಅದರ ಮೂಲಕ ಮಹಿಳೆಯರು ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು ಎಂದು ಸಚಿವ ಕೃಷ್ಣಭೈರೇಗೌಡ ತಿಳಿಸಿದರು.

Key words: CM- instructs – allotment,-sanctioned- land- Revenue Minister -Krishnabhairegowda