Monday, September 21, 2026

BDA Apartments

ಮೈಸೂರು: ಬೆಳೆ ಕೈಕೊಟ್ಟ ಹಿನ್ನಲೆ: ರೈತ ಆತ್ಮಹತ್ಯೆಗೆ ಶರಣು… BDA JK_Adv BDA Adv
Home Front Page ಮೈಸೂರು: ಬೆಳೆ ಕೈಕೊಟ್ಟ ಹಿನ್ನಲೆ: ರೈತ ಆತ್ಮಹತ್ಯೆಗೆ ಶರಣು….

ಮೈಸೂರು: ಬೆಳೆ ಕೈಕೊಟ್ಟ ಹಿನ್ನಲೆ: ರೈತ ಆತ್ಮಹತ್ಯೆಗೆ ಶರಣು….

ಮೈಸೂರು,ಜು,18,2019(www.justkannada.in): ಬೆಳೆ ಕೈಕೊಟ್ಟ ಹಿನ್ನಲೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಮುದ್ದಿನಹಳ್ಳಿಯ ವಿರೂಪಾಕ್ಷ(55) ಮೃತಪಟ್ಟ ರೈತ. ತಮ್ಮ 3ಎಕರೆ ಜಮೀನಿನಲ್ಲಿ ವಿರೂಪಾಕ್ಷ ತಂಬಾಕು ನಾಟಿ ಮಾಡಿದ್ದರು. ಮಳೆ ಕೊರತೆಯಿಂದ ತಂಬಾಕು ಬೆಳೆ ಕೈಗೆ ಬಂದಿರಲಿಲ್ಲ. ಇದರಿಂದ‌ ಮನನೊಂದು ತನ್ನ ಜಮೀನಿನ ಮರಕ್ಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇನ್ನು ವಿರೂಪಾಕ್ಷ ಅವರು ಕಾವೇರಿ ಬ್ಯಾಂಕ್‌ನಲ್ಲಿ 6.5ಲಕ್ಷ, IOCಯಲ್ಲಿ 3 ಲಕ್ಷ ಸಾಲ ಪಡೆದಿದ್ದರು. ಈ ಕುರಿತು ಕೆ.ಆರ್.ನಗರದ ಸಾಲಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: Mysore-Farmer –commits- suicide