ಸದನದ ನಡಾವಳಿಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸುವಂತಿಲ್ಲ- ವಿಧಾನಸಭೆಯಲ್ಲಿ ಹೆಚ್.ಕೆ ಪಾಟೀಲ್ ಹೇಳಿಕೆ

ಬೆಂಗಳೂರು,ಜು,18,2019(www.justkannada.in):  ಇಂದೇ ವಿಶ್ವಾಸಮತಯಾಚನೆ ಮುಗಿಸಿ ಎಂದು ರಾಜ್ಯಪಾಲರ ಕಚೇರಿಯಿಂದ ಸಂದೇಶ ರವಾನೆಯಾದ ಹಿನ್ನೆಲೆ,ಇದಕ್ಕೆ  ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿದೆ.

ಈ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಹೆಚ್.ಕೆ ಪಾಟೀಲ್, ನಾವು ಬೆಳಿಗ್ಗೆಯಿಂದ ಗಮನಿಸುತ್ತಿದ್ದೇವೆ. ರಾಜ್ಯಪಾಲರ ಪ್ರತಿನಿಧಿ ಸದನದಲ್ಲಿ ಉಪಸ್ಥಿತರಿದ್ದಾರೆ. ಇದನ್ನನಾವು  ಸ್ವಾಗತಿಸುತ್ತೇವೆ. ರಾಜ್ಯಪಾಲರು ಸದನದ ನಡಾವಳಿಯಲ್ಲಿ ಮಧ್ಯಪ್ರವೇಶಿಸುವಂತಿಲ್ಲ. ಆದರೆ ಸಂದೇಶ ರವಾನಿಸುವಂತಿಲ್ಲ ಎಂದು ಹೇಳೀದರು.

ಹಾಗೆಯೇ ಸದನದಲ್ಲಿ ಮಾತನಾಡಿದ ಕೃಷ್ಣಬೈರೇಗೌಡ, ಸದನ ನಡೆಯುತ್ತಿರುವ ಸಮಯದಲ್ಲೇ ಶಾಸಕರು ಕಣ್ಮರೆಯಾಗುತ್ತಿದ್ದಾರೆ. ಸದಸ್ಯರ ಕಣ್ಮರೆ ಬಗ್ಗೆ ಸದನಕ್ಕೆ ತಿಳಿಸಬೇಕು.  ಮಹತ್ವದ ವಿಚಾರದ ಬಗ್ಗೆ ಸದನದಲ್ಲಿ ಚರ್ಚೆ ನಡೆಯುಯತ್ತಿದೆ.  ಈ ಸದನದ ಸದಸ್ಯರ ಹಕ್ಕನ್ನ ನೀವು ರಕ್ಷಿಸಬೇಕು ಎಂದು ಸ್ಪೀಕರ್ ಗೆ ಮನವಿ ಮಾಡಿದರು.

Key words:  Governor -not interfere – proceedings-assembly-HK Patil