Friday, July 31, 2026

BDA Apartments

Home Front Page ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತುಪಡಿಸಿ-  ಸದನಕ್ಕೆ ರಾಜ್ಯಪಾಲರಿಂದ ಸಂದೇಶ ರವಾನೆ…

ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತುಪಡಿಸಿ-  ಸದನಕ್ಕೆ ರಾಜ್ಯಪಾಲರಿಂದ ಸಂದೇಶ ರವಾನೆ…

ಬೆಂಗಳೂರು,ಜು,18,2019(www.justkannada.in): ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತು ಪಡಿಸಿ ಎಂದು ಸದನಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಂದೇಶ ರವಾನಿಸಿದ್ದಾರೆ.

ವಿಶ್ವಾಸ ಮತಯಾಚನೆ ವಿಳಂಬ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ಇಂದು ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಇಂದು ರಾಜ್ಯಪಾಲರನ್ನ ಭೇಟಿಯಾಗಿ ಮನವಿ ಸಲ್ಲಿಸಿತು. ಬಳಿಕ ರಾಜಭವನ ವಿಶೇಷಾಧಿಕಾರಿ ಸ್ಪೀಕರ್ ಅವರನ್ನ ಭೇಟಿ ಮಾಡಿ ಸಂದೇಶ ರವಾನಿಸಿದರು.

ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ  ಸ್ಪೀಕರ್ ರಮೇಶ್ ಕುಮಾರ್ ರಾಜ್ಯಪಾಲರ ಸಂದೇಶವನ್ನ ಓದಿದರು. ನನಗೆ ಒಂದು ಸಂದೇಶ ರಾಜ್ಯಪಾಲರಿಂದ ಬಂದಿದೆ. ದಿನದ ಅಂತ್ಯದೊಳಗೆ ವಿಶ್ವಾಸಮತ ಸಾಬೀತುಪಡಿಸಬೇಕೆಂದು ಸೂಚನೆ ನೀಡಿದ್ದಾರೆಂದು ತಿಳಿಸಿದರು.

Key words:  today- vote of confidence- Prove -Message – Governor