ಮೈಸೂರು ಜಿಲ್ಲೆ: ನಾಲೆಗೆ ಬಿದ್ದು ರೈತ ಆತ್ಮಹತ್ಯೆಗೆ ಶರಣು…

ಮೈಸೂರು,ನವೆಂಬರ್ ,11,2020(www.justkannada.in): ಜಮೀನಲ್ಲಿ ಮೂರು ಬೋರ್ ವೆಲ್ ಗಳು ಕೈಕೊಟ್ಟ ಹಿನ್ನೆಲೆ, ನಾಲೆಗೆ ಬಿದ್ದು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.

ನಂಜನಗೂಡು ತಾಲೂಕಿನ ತಗಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.  ನಂಜುಂಡಪ್ಪ (68) ಮೃತ ರೈತ . ಇಲ್ಲಿನ ರಾಮಚಂದ್ರ ನಾಲೆಗೆ ಬಿದ್ದು ರೈತ ನಂಜುಂಡಪ್ಪ ಆತ್ಮಹತ್ಯೆಗೆ ಶರಣಾಗಿದ್ದಾರೆ.mysore-district-farmer-commits-suicide-falling-canal

ರೈತ ನಂಜುಂಡಪ್ಪ ಕಾರ್ಯ ಗ್ರಾಮದ ನಿವಾಸಿಯಾಗಿದ್ದು ಸುಮಾರು 10 ಲಕ್ಷ  ಸಾಲ ಮಾಡಿದ್ದರು. ಜಮೀನಲ್ಲಿ ಮೂರು ಬೋರ್ ವೆಲ್ ಗಳು ಕೈಕೊಟ್ಟ ಹಿನ್ನೆಲೆ. ಭಾನುವಾರ ಮನೆಯಿಂದ ಜಮೀನಿಗೆ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ಇದೀಗ ತಿ.ನರಸೀಪುರದ ಸುಜ್ಜಲೂರು ಗ್ರಾಮದ ಬಳಿ ನಂಜುಂಡಪ್ಪ ಶವವಾಗಿ ಪತ್ತೆಯಾಗಿದ್ದಾರೆ.

ಈ ಕುರಿತು ಟಿ ನರಸೀಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Mysore District-Farmer- commits suicide -falling – canal.