ಎಲ್ಲಾದರೂ ಕಲಿಯಿರಿ. ಆದರೆ, ನಿಮ್ಮ ಸೇವೆ ಇಲ್ಲಿನ ಜನರಿಗೆ ಮೀಸಲಿಡಿ : ಸಚಿವ ಡಾ.ಕೆ.ಸುಧಾಕರ್ ಸಲಹೆ 

ಮೈಸೂರು,ನವೆಂಬರ್,11,2020(www.justkannada.in) : ಜಗತ್ತಿನ ಯಾವುದೇ ಮೂಲೆಗಾದರೂ ಕಲಿಯಿರಿ. ಆದರೆ, ನಿಮ್ಮ ಸೇವೆಯನ್ನು ಇಲ್ಲಿನ ಜನತೆಗಾಗಿ ಮೀಸಲಿಡಿ ಎಂದು ಭಾವೀ ವೈದ್ಯರುಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಲಹೆ ನೀಡಿದರು.kannada-journalist-media-fourth-estate-under-lossಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾಮಠದಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ 11ನೇ ಘಟಿಕೋತ್ಸವ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿದರು.

ಹೆಚ್ಚೆಚ್ಚು ಕಲಿಯಿರಿ, ಎಷ್ಟು ತಿಳಿದುಕೊಂಡರೂ ಅದು ಕಡಿಮೆಯೇ. ವಿದೇಶಕ್ಕೆ ಹೋಗಿ ಬೇಕಾದರೂ ಕಲಿಯಿರಿ. ಆದರೆ, ಮರಳಿ ಬಂದು ಇಲ್ಲಿನ ಜನತೆಗೆ ಸೇವೆ ನಿಡುವುದನ್ನು ಮಾತ್ರ ಮರೆಯದಿರಿ. ಜೆಎಸ್ ಎಸ್ ಶ್ರೇಷ್ಠ ಶಿಕ್ಷಣ ಸಂಸ್ಥೆ. ಇಲ್ಲಿ ನೀವು ಕಲಿತಿದ್ದೀರಿ, ಸ್ಪೂರ್ತಿಯ ಸೆಲೆ ಇಲ್ಲಿದೆ. ಆ ಸ್ಫೂರ್ತಿಯನ್ನು ನಿಮ್ಮ ಜೊತೆ ಒಯ್ಯಿರಿ ಎಂದರು.

ನಾವಿಂದು ಕೋವಿಡ್ ವಿರುದ್ಧ ಹೋರಾಡುತ್ತಿದ್ದೇವೆ. ಕೋವಿಡ್ ಸೋಂಕಿತರ ಚಿಕಿತ್ಸೆ, ತಪಾಸಣೆಗಾಗಿ ಜೆಎಸ್ ಎಸ್ ಸಂಸ್ಥೆಯು ಸರ್ಕಾರದ ಜೊತೆ ಸಹಾಯಕ್ಕೆ ನಿಂತಿದೆ ಎಂದು ಜೆಎಸ್ ಎಸ್ ಸಂಸ್ಥೆಯನ್ನು ಶ್ಲಾಘಿಸಿದರು.

ನೀವೆಲ್ಲ ತಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿಯಬೇಕು

ಸ್ವಾಮೀಜಿಯವರ ಆಶೀರ್ವಾದದೊಂದಿಗೆ ನಿಮಗಿಲ್ಲಿ ಸಾಧನೆಗೆ ಅವಕಾಶ ಲಭಿಸಿದೆ. ವೈದ್ಯಕೀಯ ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಪಟ್ಟು ಪದವಿ ಪಡೆದಿದ್ದೀರಿ. ಮೊದಲು ನೀವೆಲ್ಲ ತಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿಯಬೇಕು. ಈ ಶಿಕ್ಷಣ ಇಲ್ಲಿಗೆ ನಿಲ್ಲಲ್ಲ. ಅದು ಸದಾ ಮುಂದುವರಿಯಲಿದೆ ಎಂದು ಹೇಳಿದರು.

ಜೀವನದಲ್ಲಿ ಹುಟ್ಟಿನಿಂದ ಸಾಯುವವರೆಗೂ ಕಲಿಯುವುದು ಇದ್ದೇ ಇರಲಿದೆ. ಕಲಿಯುವಿಕೆ ನಿರಂತರ. ಸಾರ್ವಜನಿಕರ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು. ಸಮುದಾಯವನ್ನು ಶಿಕ್ಷಣಭರಿತವಾಗಿ ಮಾಡಿ ಅವರಿಗೆ ಜೀವನ ಶೈಲಿಯ ಕುರಿತು ಅರಿವು ಮೂಡಿಸಬೇಕು. ನಿಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು ಎಂದರು.

ವೈದ್ಯರ ಸೃಷ್ಟಿ ಮಾಡಿರತಕ್ಕ ಈ ಸಂಸ್ಥೆ ದೇವಾಲಯ

‘ವೈದ್ಯೋ ನಾರಾಯಣೋ ಹರಿ’ ವೈದ್ಯರನ್ನು ದೇವರಿಗೆ ಹೋಲಿಕೆ ಮಾಡುತ್ತಾರೆ. ಅಂತಹ ದೇವರುಗಳನ್ನು ಸೃಷ್ಟಿ ಮಾಡಿರತಕ್ಕ ಈ ಸಂಸ್ಥೆಯೇ ದೇವಾಲಯ ಎಂದು ನಾನು ಭಾವಿಸುತ್ತೇನೆ. ನಡೆದಾಡುವ ದೈವ ಸಂಭೂತರಾಗಿ ಶ್ರೀ ಸ್ವಾಮೀಜಿ ಯವರ ವಿಶೇಷ ಆಶೀರ್ವಾದ ನಿಮ್ಮ ಇಡೀ ಜೀವನದುದ್ದಕ್ಕೂ ರಕ್ಷಾಕವಚವಾಗಿರಲಿದೆ ಎಂದು ತಿಳಿಸಿದರು.

ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಮಾಡುತ್ತಿದೆ. ರಾಜ್ಯದಲ್ಲಿ ಕೋವಿಡ್ ನಿಯಂತ್ರಣವನ್ನು ಚೆನ್ನಾಗಿ ನಿಭಾಯಿಸುತ್ತಿದ್ದೇವೆ. ಸರ್ಕಾರದ ಜೊತೆ ಆಧಾರ ಸ್ತಂಭಗಳಾಗಿ ಹಲವು ಸಂಸ್ಥೆಗಳು ನಿಂತಿವೆ. ಕರ್ನಾಟಕ ಕೋವಿಡ್ ನಿಯಂತ್ರಿಸುವಲ್ಲಿ ಸಾಧನೆಗೈದಿದೆ ಎಂದರು.

ಪ್ರಕರಣಗಳು ಕಡಿಮೆಯಾಗುತ್ತಿವೆ ಎಂದು ಮೈಮರೆಯಬಾರದು

ಇನ್ನೇನು ದೀಪಾವಳಿ ಸಮೀಪಿಸುತ್ತಿದೆ. ದಸರಾವನ್ನು ಸರಳವಾಗಿ ಆಚರಿಸಿ ಯಶಸ್ವಿಯಾಗಿದ್ದೇವೆ. ಕೋವಿಡ್ ಹೆಚ್ಚಳವಾಗಿಲ್ಲ. ನಮಗೆ ಕೇರಳ ಪಾಠವಾಗಬೇಕು. ತಿಂಗಳ ಹಿಂದೆ ಪ್ರಕರಣ ಹೆಚ್ಚಿತ್ತು. ಆದರೆ, ಇಂದು ಪ್ರಕರಣಗಳು ಕಡಿಮೆಯಾಗುತ್ತಿವೆ. ಆದರೆ, ನಾವು ಮೈಮರೆಯಬಾರದು ಎಂದು ಎಚ್ಚರಿಸಿದರು.Learn,anywhere,But,reserve,your,service,people here,Minister,Dr K.Sudhakar,advised

ಶಿವರಾತ್ರಿ ದೇಶಿಕೇಂದ್ರ ಶ್ರೀಗಳ ಸಾನಿಧ್ಯದಲ್ಲಿ ಪದವಿ ಪ್ರದಾನ ಮಾಡಲಾಗಿದ್ದು ಶ್ರೀಗಳು ಪ್ರತಿಜ್ಞಾವಿಧಿ ಬೋಧಿಸಿದರು.

ಡಾ.ಸಿದ್ದಾರ್ಥ ಸುಬ್ರಹ್ಮಣ್ಯಂ ಜೋಶಿ, ಡಾ.ಕೃಷ್ಣಕುಮಾರ್, ಡಾ.ಅಶ್ವತಿ ಕೆ. ಡಾ.ವಿನುತಾ ಜೆ, ಡಾ.ಸ್ಫೂರ್ತಿರಾಜ್ , ಡಾ.ಡಿ ಹೆಚ್.ಪ್ರವೀಣ್, ಡಾ.ಅನು ಜಾರ್ಜ್ ಟಿ, ಡಾ.ಅಭಿಮನ್ಯು ಚಂದಕ್, ಡಾ.ಸಿ.ಮಯೂರ್, ಡಾ.ಪೂಜಾ ಸೇರಿದಂತೆ ಹಲವರು ಪದಕ ಪಡೆದರು.

ವರ್ಚುವಲ್ ಲೈವ್ ಮೂಲಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದು, ಘಟಿಕೋತ್ಸವ ಕಾರ್ಯಕ್ರಮದಲ್ಲಿ ಜೆಎಸ್ಎಸ್ ವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಬೆಠಸೂರು ಮಠ್, ಸಮಕುಲಾಧಿಪತಿ ಡಾ.ಬಿ.ಸುರೇಶ್, ಕುಲಪತಿ ಸುರೀಂದರ್ ಸಿಂಗ್ ಭಾಗಿಯಾಗಿದ್ದರು.

key words : Learn-anywhere-But-reserve-your-service-people here-Minister-Dr K.Sudhakar-advised