ಮೈಸೂರು : ಜಿಲ್ಲೆಯಲ್ಲಿ ಕರೋನಾ ನಿಯಂತ್ರಣ ಸಂಬಂಧ , ಸಮುದಾಯ ಸಹಭಾಗಿತ್ವಕ್ಕೆ ಜಿಲ್ಲಾಧಿಕಾರಿ ಮಾಸ್ಟರ್ ಪ್ಲಾನ್…!

ಮೈಸೂರು, ಮೇ 20, 2021 : (www.justkannada.in news ) ಮೈಸೂರು ನಗರ ಮತ್ತು ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಸಮುದಾಯದ ಸಹಭಾಗಿತ್ವದಲ್ಲಿ ಸದರಿ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ, ನಗರ / ಪಟ್ಟಣಗಳ ಸ್ಥಳೀಯ ಪ್ರಾಧಿಕಾರಗಳ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿದ್ದು, ಈ ಟಾಸ್ಕ್ ಫೋರ್ಸ್ ಸಮಿತಿಗಳ ಕಾರ್ಯ ಕ್ಷಮತೆ ಹೆಚ್ಚಿಸಿ ಅವುಗಳ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ಸಂಪೂರ್ಣ ನಿಲ್ಲಿಸುವ ಉದ್ದೇಶದಿಂದ ಮೈಸೂರು ಜಿಲ್ಲಾಡಳಿತ ಪ್ರೋತ್ಸಾಹದಾಯಕ ಪುರಸ್ಕಾರ ಯೋಜನೆಯನ್ನು CSR ಸಹಯೋಗದೊಂದಿಗೆ ಪ್ರಾರಂಭಿಸಿದೆ.
ಕೋವಿಡ್ ಮುಕ್ತ ಗ್ರಾಮ ಪಂಚಾಯಿತಿ ಪುರಸ್ಕಾರ , ಕೋವಿಡ್ ಮುಕ್ತ ವಾರ್ಡ್ ಪುರಸ್ಕಾರ ಹಾಗೂ ಉತ್ತಮ ಕೋವಿಡ್ ಮಿತ್ರ ಕಾಯಕ ಪುರಸ್ಕಾರ ನೀಡಲು ಮುಂದಾಗಿದೆ.jk

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿರುವುದಿಷ್ಟು…
ಈಗಾಗಲೇ ಮೈಸೂರು ಜಿಲ್ಲೆಯಾದ್ಯಂತ ಮನೆಮನ ಕೋವಿಡ್ ಸಮೀಕ್ಷೆ ಪ್ರಗತಿಯಲ್ಲಿದೆ. ಸದರಿ ಸಮೀಕ್ಷೆ ಪೂರ್ಣಗೊಂಡ ನಂತರ, ಮೈಸೂರು ಮಹಾನಗರ ಪಾಲಿಕೆ, ನಗರ / ಪಟ್ಟಣಗಳ ಸ್ಥಳೀಯ ಪ್ರಾಧಿಕಾರಗಳ ವಾರ್ಡ್ ಹಾಗೂ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸತತವಾಗಿ 21 ದಿನಗಳ ಅವಧಿಯಲ್ಲಿ ಹೊಸದಾಗಿ ಯಾವುದೇ ಕೋವಿಡ್ -19 ಸೋಂಕಿತರು ಕಂಡು ಬಾರದೇ ಇದ್ದಲ್ಲಿ ಅಂತಹ ವಾರ್ಡ್, ಗ್ರಾಮ ಪಂಚಾಯಿತಿ ಹಾಗೂ ಸಂಬಂಧಪಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಪ್ರೋತ್ಸಾಹ ಧನ ಹಾಗೂ ಟಾಸ್ಕ್ ಫೋರ್ಸ್ ಸಮಿತಿಗಳ ಸದಸ್ಯರಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ರಾಷ್ಟ್ರೀಯ ವೈದ್ಯರ ದಿನವಾದ ಜುಲೈ 01 ರಂದು ನೀಡಲಾಗುತ್ತದೆ.

ಪ್ರತಿ ತಾಲ್ಲೂಕು ವ್ಯಾಪ್ತಿಯಲ್ಲಿ ಇರುವ ಗ್ರಾಮ ಪಂಚಾಯಿತಿಗಳಲ್ಲಿ ಈ ರೀತಿ ಶೂನ್ಯ ಕೋವಿಡ್ ಪ್ರಕರಣ ಹೊಂದಿರುವ ಮೊದಲ 3 ಗ್ರಾಮ ಪಂಚಾಯಿತಿಗಳಿಗೆ ಕೋವಿಡ್ ಮುಕ್ತ ಗ್ರಾಮ ಪಂಚಾಯಿತಿ ಪುರಸ್ಕಾರ ನೀಡಲಾಗುವುದು. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್, ಮೈಸೂರು ರವರು ಪ್ರತಿದಿನ ಮೈಸೂರು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕೋವಿಡ್-19 ಸೋಂಕಿತರ ಬಗ್ಗೆ ಮಾಹಿತಿಯನ್ನು ಕ್ರೋಢೀಕರಿಸಿ ಪ್ರತಿ ತಾಲ್ಲೂಕಿನಲ್ಲಿ ಉತ್ತಮ ಸಾಧನೆ ಮಾಡಿದ 3 ಗ್ರಾಮ ಪಂಚಾಯಿತಿಗಳ ವರದಿಯನ್ನು ಸಲ್ಲಿಸಲು ತಿಳಿಸಲಾಗಿದೆ.

ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ ಇರುವಂತಹ ಪ್ರತಿ ನಗರ ಸಭೆ / ಪುರಸಭೆ / ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪ್ರತಿದಿನ ವರದಿಯನ್ನು ಪಡೆದು ಶೂನ್ಯ ಕೋವಿಡ್ ಪ್ರಕರಣ ಹೊಂದುವಲ್ಲಿ ಉತ್ತಮ ಸಾಧನೆ ಮಾಡಿರುವ ಮೊದಲ 3 ವಾರ್ಡ್ ಗಳಿಗೆ ಕೋವಿಡ್ ಮುಕ್ತ ವಾರ್ಡ್ ಪುರಸ್ಕಾರ ನೀಡಲಾಗುವುದು. ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿಕೋಶ ಮೈಸೂರು ಹಾಗೂ ಸಂಬಂಧ ಪಟ್ಟ ಉಪವಿಭಾಗಾಧಿಕಾರಿಗಳು ಜಂಟಿಯಾಗಿ ಕ್ರೋಢೀಕರಿಸಿ ವರದಿ ನೀಡುವರು.

ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶೂನ್ಯ ಸಾಧನೆ ಮಾಡಿರುವ 3 ವಾರ್ಡ್ ಗಳಿಗೆ ತಲಾ ರೂ. 1,00,000 ಗಳ ಪ್ರೋತ್ಸಾಹಧನವನ್ನು ವಾರ್ಡ್ ನಲ್ಲಿನ ಅಭಿವೃದ್ಧಿಕಾರ್ಯಕ್ಕೆ ಬಳಸಲು ಹಾಗೂ ಸದರಿ ವಾರ್ಡ್ ಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದ ವಾರ್ಡ್ ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯ ಎಲ್ಲಾ ಸದಸ್ಯರಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು.Mysore-DC- Plan - Corona Control - Community 

ಶೂನ್ಯ ಸಾಧನೆ ಮಾಡಿದ ನಗರ ಸಭೆ / ಪುರಸಭೆ / ಪಟ್ಟಣ ಪಂಚಾಯಿತಿಯ ವಾರ್ಡ್ ಗಳಿಗೆ ಹಾಗೂ ಗ್ರಾಮ ಪಂಚಾಯಿತಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಳಿಗೆ ತಲಾ ರೂ.25,000 ಗಳ ಪ್ರೋತ್ಸಾಹ ಧನವನ್ನು ಅಭಿವೃದ್ಧಿ ಕಾರ್ಯಕ್ಕಾಗಿ ಹಾಗೂ ಆಯಾ ಟಾಸ್ಕ್ ಫೋರ್ಸ್ ಗಳ ಸದಸ್ಯರಿಗೆ ಪ್ರಶಸ್ತಿ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು.

key words: Mysore-DC- Plan – Corona Control – Community