ಕಪ್ಪು ಶಿಲೀಂಧ್ರ ರೋಗದ ಚಿಕಿತ್ಸೆಗೆ ಔಷಧ ಕೊರತೆ: ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿಕೆ ಟೀಕೆ…

ಬೆಂಗಳೂರು,ಮೇ,20,2021(www.justkannada.in): ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಎಂದು ಸರ್ಕಾರ ಹೇಳಿದೆ. ಆದರೆ ರೋಗದ ಚಿಕಿತ್ಸೆಗೆ ಅಗತ್ಯವಿರುವ Liposomal Amphotericin B ಔ‍ಷಧ ದಾಸ್ತಾನು ರಾಜ್ಯದಲ್ಲಿ ಇಲ್ಲ. ದೊಡ್ಡ ಮಟ್ಟದಲ್ಲಿ ಕಾಡುವ ಮುನ್ಸೂಚನೆ ನೀಡಿರುವ ರೋಗದ ನಿಯಂತ್ರಣಕ್ಕೆ ಸರ್ಕಾರ ಯಾವ ಹಂತಕ್ಕೆ ಸಿದ್ಧವಾಗಿದೆ ಎಂಬುದಕ್ಕೆ ಔಷಧ ಕೊರತೆ ಸಾಕ್ಷಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.jk

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕಪ್ಪು ಶಿಲಿಂಧ್ರ ರೋಗಕ್ಕೆ ಆರಂಭದಲ್ಲೇ ಚಿಕಿತ್ಸೆ ನೀಡಬೇಕು. ಯಾಕೆಂದರೆ ರೋಗ ಅತ್ಯಂತ ವೇಗವಾಗಿ ವ್ಯಾಪಿಸುತ್ತದೆ. 2-3 ದಿನಗಳಲ್ಲಿ ಅದು ಕಣ್ಣು, ಕಿವಿ ಮತ್ತು ಮೆದುಳನ್ನು ವ್ಯಾಪಿಸುತ್ತದೆ ಎನ್ನುತ್ತಾರೆ ತಜ್ಞರು. ಹೀಗಾಗಿ ಇದಕ್ಕೆ ತುರ್ತು ಚಿಕಿತ್ಸೆ ಅನಿವಾರ್ಯ. ಅತ್ಯಂತ ತುರ್ತಿನ ಈ ಕಾಯಿಲೆಯನ್ನು ಔಷಧವೇ ಇಲ್ಲದೇ ಎದುರಿಸಲು ಸಾಧ್ಯವೇ? ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಕೋವಿಡ್‌ ನಿಂದ ಚೇತರಿಕೆ ಕಂಡು ಬಿಡುಗಡೆಯಾಗಿರುವವರ ಪೈಕಿ ವಾರಕ್ಕೆ 400 ಮಂದಿ ಕಪ್ಪು ಶಿಲೀಂಧ್ರ ರೋಗಕ್ಕೆ ತುತ್ತಾಗಲಿದ್ದಾರೆ ಎಂದು ಸರ್ಕಾರಕ್ಕೆ ತಜ್ಞರು ತಿಳಿಸಿದ್ದಾರೆ. ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆ ವಿಧಾನ ಈ ರೋಗಕ್ಕೆ ಮೂಲ ಕಾರಣ. ಹೀಗಾಗಿ ಇದು ಸರ್ಕಾರವೇ ಆಹ್ವಾನಿಸಿದ ಅಪಾಯ. ಸೂಕ್ತ ಪರಿಹಾರ ಕಲ್ಪಿಸುವುದೂ ಸರ್ಕಾರದ ಹೊಣೆ ಎಂದು ಹೆಚ್.ಡಿಕೆ ತಿಳಿಸಿದ್ದಾರೆ.

 ಹಾಗೆಯೇ ಕಪ್ಪು ಶಿಲೀಂಧ್ರ ಚಿಕಿತ್ಸೆಗೆ ಅಗತ್ಯವಿರುವ Liposomal Amphotericin B ಔಷಧ ಕೊರತೆ ನಿವಾರಿಸುವುದು ಈ ಹೊತ್ತಿನ ಅಗತ್ಯ. ಕಪ್ಪು ಶಿಲೀಂಧ್ರ ರೋಗ ಕೋವಿಡ್‌ ನಂತೆ ಅಲ್ಲ. ಅದಕ್ಕಿಂತಲೂ ಭೀಕರ. ಈ ಕಾಯಿಲೆಯಲ್ಲಿ ಸಾವಿನ ಪ್ರಮಾಣವೂ ಅಧಿಕವಾಗಿರುವುದು ಆತಂಕ ಮತ್ತು ಗಮನಿಸಲೇ ಬೇಕಾದ ಸಂಗತಿ. ಸರ್ಕಾರ ಔಷಧ ಹೊಂದಿಸುವುದರತ್ತ ಕೂಡಲೇ ಗಮನ ಹರಿಸಲಿ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.drug-shortage-treatment-black-fungus-disease-former-cm-hd-kumaraswamy-government

ಭಾರತದ Bharat Serum Institute, Sun Pharma, Nylon, Cipla, Gufic Celon ಕಂಪನಿಗಳು ಮತ್ತು ವಿದೇಶದ Swiss Parenterals (Switzerland), Aspen (Australia), Abbott laboratories(USA), Arkopharma(USA) ಕಂಪನಿಗಳು ಕಪ್ಪು ಶಿಲೀಂಧ್ರ ರೋಗಕ್ಕೆ ಔಷಧ ತಯಾರಿಸುತ್ತವೆ. ಈ ಕಂಪನಿಗಳಿಂದ ಸರ್ಕಾರ ಕೂಡಲೇ ಔಷಧ ತರಿಸಿಕೊಳ್ಳಬೇಕು ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

Key words: Drug shortage – treatment – black fungus- disease-Former CM- HD kumaraswamy-government.