Saturday, October 3, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ಹಣಕ್ಕಾಗಿ ಮಗು ಕರೆದೊಯ್ದಿದ್ದು ತಪ್ಪು: ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದ್ರೆ ಕಾನೂನು ಕ್ರಮ-ಡಿಸಿ ಲಕ್ಷ್ಮಿಕಾಂತರೆಡ್ಡಿ

ಹಣಕ್ಕಾಗಿ ಮಗು ಕರೆದೊಯ್ದಿದ್ದು ತಪ್ಪು: ಮೈಕ್ರೋ ಫೈನಾನ್ಸ್ ಕಿರುಕುಳ ನೀಡಿದ್ರೆ ಕಾನೂನು ಕ್ರಮ-ಡಿಸಿ ಲಕ್ಷ್ಮಿಕಾಂತರೆಡ್ಡಿ

ಮೈಸೂರು,ಜೂನ್,25,2025 (www.justkannada.in): ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ ಮುಂದುವರೆದ ಹಿನ್ನೆಲೆಯಲ್ಲಿ ಹಣ ವಸೂಲಿ ನೆಪದಲ್ಲಿ ಕಿರುಕುಳ ನೀಡುವ ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವುದಾಗಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಎಚ್ಚರಿಸಿದ್ದಾರೆ.

ಬಜಾಜ್ ಕಂಪನಿ ಅವರು ಮಗು  ಕರೆದೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಮೈಸೂರು ಜಿಲ್ಲೆಯಲ್ಲಿ ಇಂತಹ ಪ್ರಕರಣ ಮರುಕಳಿಸಬಾರದು. ಬಜಾಜ್ ಸೇರಿ ಯಾವುದೇ ಮೈಕ್ರೋ ಕಂಪನಿ ಕಿರುಕುಳ ನೀಡಬಾರದು ಎಂದರು.

ಹಣಕ್ಕಾಗಿ ಮಗುವನ್ನ ಕರೆದೊಯ್ದಿದ್ದು ತಪ್ಪು. ಈಗಾಗಲೇ ಆತನನ್ನ ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ. ಇನ್ಮುಂದೆ ಯಾರೂ ಕೂಡ ಹಿಂಸೆ ನೀಡಬಾರದು. ಒಂದು ವೇಳೆ ಹಿಂಸೆ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.vtu

Key words: Legal action, microfinance, harasses, Mysore, DC, LaxmiKanthareddy