ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಯಶಸ್ವಿ: ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದ ಸಚಿವ ವಿ.ಸೋಮಣ್ಣ….

ಮೈಸೂರು,ಅ,9,2019(www.justkannada.in): ಈ ಬಾರಿ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಯಶಸ್ವಿಯಾಗಿದೆ. ದಸರಾ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ವಿ.ಸೋಮಣ್ಣ,  ಈ ಬಾರಿ ದಸರಾ ಯಶಸ್ವಿಯಾಗಿದೆ.  ದಸರಾದಲ್ಲಿ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಗ್ರಾಮೀಣ ದಸರಾ, ಮನೆಮನೆಗೆ ದಸರಾ ಖುಷಿ ನೀಡಿದವು. ಉಪಸಮಿತಿ ಕಾರ್ಯ ಅದ್ಬುತವಾಗಿತ್ತು. ದಸರಾ ಯಶಸ್ವಿಯಾಗಲು ಕಾರಣರಾದ ಎಲ್ಲರಿಗೂ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

ಈವರೆಗೆ ದಸರಾ ಮಂತ್ರಿಯಾಗಿ ಕೆಲಸ ಮಾಡಿದ್ದೆ. ಇನ್ಮುಂದೆ ಸಂಪುಟದಲ್ಲಿ ವಸತಿ ಸಚಿವನಾಗಿ ಕೆಲಸ ಮಾಡುತ್ತೇನೆ…

ಇನ್ನು ದಸರಾ ಬಗ್ಗೆ ಪೂರ್ಣ ವಿವರ ಇರಲಿಲ್ಲ. ದಸರಾ ಈ ಮಟ್ಟಕ್ಕೆ ಇದೆ ಎಂದು ನನಗೆ ಗೊತ್ತಿರಲಿಲ್ಲ. ದಸರಾ ಅಂದರೇ ಮೆರವಣಿಗೆ ಮಾತ್ರ ಅಂದುಕೊಂಡಿದ್ದೆ. ಆದರೇ ದಸರಾ ಇಷ್ಟೊಂದು ಆಳವಾಗಿ ಇದೆ ಎಂದು ಗೊತ್ತಾಯಿತು. ಈವರೆಗೆ ದಸರಾ ಮಂತ್ರಿಯಾಗಿ ಕೆಲಸ ಮಾಡಿದ್ದೆ. ಇನ್ಮುಂದೆ ಸಂಪುಟದಲ್ಲಿ ವಸತಿ ಸಚಿವನಾಗಿ ಕೆಲಸ ಮಾಡುತ್ತೇನೆ. ಸಂಕಷ್ಟದಲ್ಲಿ ಸಿಲುಕಿರುವ ನೆರೆ ಸಂತಸ್ತರ ಕಷ್ಟ ಆಲಿಸುತ್ತೇನೆ. ನೆರೆ ಪ್ರದೇಶದಲ್ಲಿ ಓಡಾಡಿ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಸಿಕೊಡುತ್ತೇನೆ ಎಂದು ಸಚಿವ ವಿ.ಸೋಮಣ್ಣ ಹೇಳಿದರು.

Key words: Mysore Dasara – successful- Minister- V. Somanna -thanked -all