ಪರಪ್ಪನ ಅಗ್ರಹಾರದಲ್ಲಿ ಸಿಸಿಬಿ ಪೊಲೀಸರಿಂದ ದಾಳಿ: ಗಾಂಜಾ ಪೈಪ್, ಮಾರಕಾಸ್ತ್ರಗಳು ವಶಕ್ಕೆ….

ಬೆಂಗಳೂರು,ಅ,9,2019(www.justkannada.in):  ಮೊಬೈಲ್ ಮತ್ತು ಗಾಂಜಾ ಬಳಕೆ ಬಗ್ಗೆ ಆರೋಪ ಕೇಳಿ ಬಂದ ಹಿನ್ನೆಲೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ದಾಳಿ ನಡೆಸಿ ಗಾಂಜಾ ಪೈಪ್ ಮತ್ತು ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ.

ಇಂದು ಬೆಳಿಗ್ಗೆ 5 ಗಂಟೆಗೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 60 ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ದಾಳಿ ವೇಳೆ ಖೈದಿಗಳು ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದಾರೆ. ಪರಪ್ಪನ ಅಗ್ರಹಾರದ ಒಳಗೆ ಮೊಬೈಲ್ ಫೋನ್ , ಮಾರಕಾಸ್ತ್ರಗಳಿರುವುದು ಪತ್ತೆಯಾಗಿದೆ.

ಇನ್ನು ಸಿಸಿಬಿ ಪೊಲೀಸರು 32 ಚಾಕ್ ಗಳು ಡ್ರ್ಯಾಗರ್ ಗಳು, ಗಾಂಜಾಪೈಪ್ ಗಳು ಸೇರಿ ಮಾರಕಾಸ್ತ್ರಗಳನ್ನ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿದ್ದೂ ಕ್ರಿಮಿನಲ್ ಬುದ್ದಿ ಬಿಡದ  ಖೈದಿಗಳು ಜೈಲಿನಲ್ಲೇ ತಟ್ಟೆ, ಸೋಟಿನಿಂದ ಮಾರಕಾಸ್ತ್ರ ತಯಾರಿಸುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

Key words: Attack – CCB police – Parappana Agrahara.