ನನ್ನ ಮತ್ತು ಡಿಕೆ ಶಿವಕುಮಾರ್ ನಡುವೆ ಯಾವುದೇ ವ್ಯವಹಾರ ಇಲ್ಲ- ಇಡಿ ವಿಚಾರಣೆಗೂ ಮುನ್ನ ಕೆ.ಎನ್ ರಾಜಣ್ಣ ಹೇಳಿಕೆ…

ನವದೆಹಲಿ,ಅ,9,2019(www.justkannada.in):  ಮಾಜಿ ಸಚಿವ ಡಿ.ಕೆ ಶಿವಕುಮಾರ್ ಪ್ರಕರಣದಡಿ ವಿಚಾರಣೆಗೆ ಇಡಿ ಅಧಿಕಾರಿಗಳು ಕರೆದಿದ್ದಾರೆ. ನನ್ನ ಮತ್ತು ಡಿ.ಕೆ ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರ ಇಲ್ಲ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ತಿಳಿಸಿದರು.

ಇಂದು ಬೆಳಿಗ್ಗೆ 11 ಗಂಟೆಗೆ ಇಡಿ ಮುಂದೆ ಕಾಂಗ್ರೆಸ್ ಮುಖಂಡ ಕೆ.ಎನ್ ರಾಜಣ್ಣ ಹಾಜರಾಗಲಿದ್ದು ಇದಕ್ಕೂ ಮುನ್ನ ಮಾಧ್ಯಮಗಳ ಜತೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಚಾರಣೆಗೆ ಕರೆದಿದ್ದಾರೆ. ಗುರುತಿನ ಚೀಟಿ ಜತೆ ಮಾತ್ರ ಬರಲು ಹೇಳಿದ್ದಾರೆ. ಹರ್ಷಾ ಶುಗರ್ಸ್ ಸಂಬಂಧ ಸ್ಪಷ್ಟೀಕರಣಕ್ಕೆ ಕರೆದಿರಬಹುದು ಎಂದು ತಿಳಿಸಿದರು.

ಹರ್ಷಾ ಶುಗರ್ಸ್ ಗೆ ಹಲವು ಬ್ಯಾಂಕ್ ಗಳು ಸಾಲ ನೀಡಿವೆ. ನನ್ನ ಮತ್ತು ಡಿ.ಕೆ ಶಿವಕುಮಾರ್ ನಡುವೆ ಪ್ರತ್ಯೇಕ ವ್ಯವಹಾರ ಇಲ್ಲ. ವಿಚಾರಣೆ ವೇಳೆ ಏನು ಕೇಳುತ್ತಾರೋ ಅದಕ್ಕೆ ಮಾತ್ರ ಉತ್ತರ ನೀಡುತ್ತೇನೆ ಎಂದು ಕೆ.ಎನ್ ರಾಜಣ್ಣ ತಿಳಿಸಿದರು.

Key words:  no business -DK Sivakumar-  KN Rajanna- – ED- hearing