Monday, August 17, 2026

BDA Apartments

Home Front Page ದಸರಾ ಕಾರ್ಯಕ್ರಮ, ಪರೇಡ್ ನಲ್ಲಿ ಕುಟುಂಬಸ್ಥರು ಭಾಗಿ ಯಾಕೆ..? ಬಾಲಕನ ಬಗ್ಗೆ ಮಾಹಿತಿ ಕೇಳಿದ ‘ಕೈ’...

ದಸರಾ ಕಾರ್ಯಕ್ರಮ, ಪರೇಡ್ ನಲ್ಲಿ ಕುಟುಂಬಸ್ಥರು ಭಾಗಿ ಯಾಕೆ..? ಬಾಲಕನ ಬಗ್ಗೆ ಮಾಹಿತಿ ಕೇಳಿದ ‘ಕೈ’ ಹೈಕಮಾಂಡ್

ಮೈಸೂರು,ಸೆಪ್ಟಂಬರ್,3,2025 (www.justkannada.in):  ನಿನ್ನೆ ಮೈಸೂರು ದಸರಾ ಕಾರ್ಯಕ್ರಮದ ಸಿಎಂ, ಸಚಿವರ  ಪರೇಡ್ ವೇಳೆ ಬಾಲಕನೋರ್ವ ಕಾಣಿಸಿಕೊಂಡ ಹಿನ್ನೆಲೆಯಲ್ಲಿ  ಬಾಲಕನ ಬಗ್ಗೆ   ಮಾಹಿತಿ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

ನಿನ್ನೆ ದಸರಾ ಕಾರ್ಯಕ್ರಮದಲ್ಲಿ ತೆರದ ವಾಹನದಲ್ಲಿ ಸಿಎಂ, ಡಿಸಿಎಂ ಸಚಿವರು ಪರೇಡ್ ನಡೆಸಿದ್ದರು.  ಈ ವೇಳೆ ನಾಯಕರ ಮಧ್ಯೆ ಕಪ್ಪು ಕನ್ನಡಕ ಹಾಕಿದ್ದ ಬಾಲಕ ಕಾಣಿಸಿಕೊಂಡಿದ್ದನು. ಈ ಬಾಲಕ ಸಚಿವ ಹೆಚ್ ಸಿ ಮಹದೇವಪ್ಪಅವರ ಮೊಮ್ಮಗ  ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದಸರಾ ಸರ್ಕಾರಿ ಕಾರ್ಯಕ್ರಮದಲ್ಲಿ ಸಾಂವಿಧಾಣಿಕ ಹುದ್ದೆಯಲ್ಲಿ ಇಲ್ಲದವರ ಭಾಗಿಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು,  ಸರ್ಕಾರಿ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಭಾಗಿಯಾಗಿದ್ದು ಯಾಕೆ?  ಬಾಗಿಯಾಗಿದ್ದವರ ಬಗ್ಗೆ ಮಾಹಿತಿ  ನೀಡುವಂತೆ ಸೂಚಿಸಿದೆ ಎಂಬ ಮಾಹಿತಿ  ಲಭ್ಯವಾಗಿದೆ.

Key words: Mysore Dasara, parade, boy , congress, high command