ಅ.15 ರಂದು ಮೈಸೂರು ದಸರಾ ಜಂಬೂಸವಾರಿ: ಅರಮನೆ ಸುತ್ತಮುತ್ತ ಬಿಗಿ ಪೋಲಿಸ್ ಬಂದೋಬಸ್ತ್

ಮೈಸೂರು,ಅಕ್ಟೋಬರ್,13,2021(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ವಿಜಯದಶಮಿ ದಿನ ಅಕ್ಟೋಬರ್ 15 ರಂದು ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗುತ್ತಿದೆ.

ಈ ಮಧ್ಯೆ ಜಂಬೂ ಸವಾರಿ ಮೆರವಣಿಗೆ ಉದ್ಘಾಟಿಸಲು ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿಗೆ ಆಗಮಿಸಲಿದ್ದಾರೆ. ನಂತರ ಮಧ್ಯಾಹ್ನ 1 ಗಂಟೆಗೆ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಲಿದ್ದು ಇದಾದ ಬಳಿಕ ಸಂಜೆ 4.36 ಕ್ಕೆ  ನಂದಿಧ್ವಜಕ್ಕೆ ಪೂಜೆ ಸಲ್ಲಿಸಲಿದ್ದಾರೆ. ನಂತರ ಸಂಜೆ 5 ರಿಂದ 5 .30ರ ಒಳಗೆ  ಜಂಬೂಸವಾರಿ ಮೆರವಣಿಗೆ ಉದ್ಘಾಟನೆ ಮಾಡಲಿದ್ದು ಅಂದು‌ ಮೈಸೂರಿನಲ್ಲೆ ವಾಸ್ತವ್ಯ ಹೂಡಲಿದ್ದಾರೆ.  ಶನಿವಾರ ಬೆಳಗ್ಗೆ 10ಕ್ಕೆ ಹೆಲಿಕ್ಯಾಪ್ಟರ್ ಮೂಲಕ ಚಿಕ್ಕಮಗಳೂರಿಗೆ ಸಿಎಂ ಬೊಮ್ಮಾಯಿ ಪ್ರಯಾಣ ಬೆಳೆಸಲಿದ್ದಾರೆ.

ವಿಜಯದಶಮಿ ದಿನ ಅರಮನೆ ಸುತ್ತಮುತ್ತ ಬಿಗಿ ಪೋಲಿಸ್ ಬಂದೋಬಸ್ತ್

ವಿಜಯದಶಮಿ ದಿನ ಮೈಸೂರು ಅರಮನೆ ಸುತ್ತಮುತ್ತ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದ್ದು, ಅರಮನೆಯ ಸುತ್ತಲಿನ ರಸ್ತೆಗಳಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ನಾಳೆ ಪೋಲಿಸ್ ಇಲಾಖೆಯಿಂದ ಅಧಿಕೃತ ಆದೇಶ ಹೊರಡಿಸಲಾಗುವುದು ಸಾರ್ವಜನಿಕರು ಸಹಕರಿಸುವಂತೆ ನಗರ ಪೋಲಿಸ್ ಆಯುಕ್ತ ಡಾ ಚಂದ್ರಗುಪ್ತ ಕೋರಿದ್ದಾರೆ.

ಅರಮನೆ ಒಳಗಡೆ ಕೋರೋನಾ ನಿಯಮದ ಅಡಿಯಲ್ಲಿ ಸೂಕ್ತ ಭದ್ರತೆಯೊಂದಿಗೆ ಮೆರವಣಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಇವತ್ತಿನ ಅಂತಿಮ ಹಂತದ ರಿಹರ್ಸಲ್ ಯಶಸ್ವಿಯಾಗಿ ನಡೆದಿದೆ. ದಸರಾಗೆ ಬೇಕಾದ ಎಲ್ಲಾ ಸಿದ್ದತೆಗಳು ಮುಕ್ತಾಯವಾಗಿದೆ ಎಂದು ನಗರ ಪೋಲಿಸ್ ಆಯುಕ್ತ ಡಾ ಚಂದ್ರಗುಪ್ತ ಹೇಳಿದರು.

Key words: Mysore Dasara- Jambusawari –august- 15th-tight- police -security

ENGLISH SUMMARY…

Dasara Jambu Savari on Oct. 15: Tight police security around Ambavilasa Palace
Mysuru, October 13, 2021 (www.justkannada.in): The world-famous Mysuru Dasara Jambu Savari will take place on October 15, on Vijayadashami day. Preparations are in full swing for the same.
Chief Minister Basavaraj Bommai will arrive in Mysuru at noon on Friday to inaugurate the Dasara Jambu Savari. At 1.00 pm he will visit the Suttur Math in the city and will offer puja to the Nandi Dhwaja at 4.36 pm. The Dasara Jambu Savari will take place between 5.00 and 5.30 pm. The Chief Minister will stay in Mysuru for the day and will leave for Chikkamagaluru on Saturday at 10.00 am.
On the occasion of Vijayadashami, police security will be beefed up around the Ambavilasa palace. Entry for the public has been restricted in the roads around the palace. The police department will issue a circular regarding the restrictions. Police Commissioner Dr. Chandragupta has requested the public to cooperate.
Keywords: Mysuru Dasara/ Jambu Savari/ Vijayadashami/ police security/ palace