ಡಿಕೆ ಶಿವಕುಮಾರ್ ಡೀಲ್ ಬಗ್ಗೆ  ದೂರು ಕೊಟ್ಟರೆ ತನಿಖೆ- ಗೃಹ ಸಚಿವ ಅರಗ ಜ್ಞಾನೇಂದ್ರ.

ಬೆಂಗಳೂರು,ಅಕ್ಟೋಬರ್,13,2021(www.justkannada.in): ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಬಗ್ಗೆ ಕಾಂಗ್ರೆಸ್ ನಾಯಕರ ಸ್ಪೋಟಕ ಮಾತು ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಡಿಕೆ ಶಿವಕುಮಾರ್ ಡೀಲ್ ಬಗ್ಗೆ  ದೂರು ಕೊಟ್ಟರೆ ತನಿಖೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ, ಈ ಬಗ್ಗೆ ವಿ.ಎಸ್ ಉಗ್ರಪ್ಪ ದೂರು ಕೊಟ್ಟರೇ ತನಿಖೆ ಮಾಡುತ್ತೇವೆ.  ಸುಮಟೋ ಕೇಸ್  ಕಷ್ಟ. ಹೀಗಾಗಿ ಅವರೇ ದೂರು ನೀಡಲಿ. ಬಾಯಿ ಮಾತಲ್ಲಿ ಹೇಳಿದ್ರೆ ಅದು ಬೊಗಳೆ ಆಗುತ್ತೆ.  ಭ್ರಷ್ಟಾಚಾರ ಮುಕ್ತವಾಗಲಿ ಅನ್ನೋ ಕಾಳಜಿ ಇದ್ರೆ ದೂರು ನೀಡಲಿ ಎಂದು ಹೇಳಿದರು.

ಕಾಂಗ್ರೆಸ್ ನಾಯಕರಾದ ವಿ ಎಸ್ ಉಗ್ರಪ್ಪ ಮತ್ತು ಸಲೀಂ  ವೇದಿಕೆಯಲ್ಲಿ ಗುಸುಗುಸು  ಮಾತನಾಡುವ ವೇಳೆ ಡಿ.ಕೆ ಶಿವಕುಮಾರ್ ಕಲೆಕ್ಷನ್ ಗಿರಾಕಿ ದೊಡ್ಡ ಸ್ಕ್ಯಾಮ್ ಎಂದು ಮಾತನಾಡಿಕೊಂಡಿದ್ದ ಮಾತು ವೈರಲ್ ಆಗಿತ್ತು.

Key words: Investigate –KPCC-president-DK Shivakumar –complains- about –deal-Home Minister -Araga Jnanendra.