ಮೈಸೂರು ದಸರಾ ಮಹೋತ್ಸವ: ಅಧಿಕಾರಿಗಳನ್ನೊಳಗೊಂಡ 16 ಉಪಸಮಿತಿಗಳ ರಚನೆ…

ಮೈಸೂರು,ಆ,28,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ ಆಚರಣೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗುತ್ತಿದ್ದು ಜಿಲ್ಲಾಡಳಿತ ವತಿಯಿಂದ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ.  ಈ ನಡುವೆ ದಸರಾ ಆಚರಣೆಗಾಗಿ ಸರ್ಕಾರಿ ಅಧಿಕಾರಿಗಳನ್ನೊಳಗೊಂಡ ಉಪಸಮಿತಿಗಳನ್ನ ರಚನೆ ಮಾಡಲಾಗಿದೆ.

ಈ ಬಾರಿಯೂ ಅಧಿಕಾರೇತರ ಹಾಗೂ ಜನಪ್ರತಿನಿಧಿಗಳನ್ನು ಕೈ ಬಿಟ್ಟಿರುವ ಜಿಲ್ಲಾಡಳಿತ ಸರ್ಕಾರಿ ಅಧಿಕಾರಿಗಳನ್ನೊಳಗೊಂಡ ಉಪಸಮಿತಿಗಳನ್ನ ಮಾತ್ರ ರಚಿಸಿದೆ. 16 ಉಪಸಮಿತಿಗಳ ರಚನೆ ಮಾಡಲಾಗಿದ್ದು 16 ಉಪಸಮಿತಿಗಳಿಗೆ ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳನ್ನ ನೇಮಕ ಮಾಡಲಾಗಿದೆ.

ದಸರಾ ಕಾರ್ಯಕಾರಿ ಸಮಿತಿ ಯಾವೊಬ್ಬ ಜನಪ್ರತಿನಿಧಿಗಳು ಹಾಗೂ ಅಧಿಕಾರೇತರ ವ್ಯಕ್ತಿಗಳನ್ನು ಉಪಸಮಿತಿಯಲ್ಲಿ ಸೇರಿಸಿಕೊಂಡಿಲ್ಲ. ಇನ್ನು ಉಪಸಮಿತಿಗಳನ್ನ ರಚಿಸಿ ಮೈಸೂರು ಜಿಲ್ಲಾಧಿಕಾರಿ ಹಾಗೂ ದಸರಾ ವಿಶೇಷಾಧಿಕಾರಿ ಅಭಿರಾಮ್‌ ಜಿ. ಶಂಕರ್‌ರಿಂದ ಆದೇಶ ಹೊರಡಿಸಿದೆ.

Key words: mysore Dasara -Formation – 16 Subcommittees- – Officers.