Saturday, October 31, 2026

Dasara Wishes

Happy Dasara
Home Cinema ಮೈಸೂರಿನ ಜೆ.ಎಸ್.ಎಸ್ ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಡಾಲಿ ಧನಂಜಯ್…

ಮೈಸೂರಿನ ಜೆ.ಎಸ್.ಎಸ್ ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಡಾಲಿ ಧನಂಜಯ್…

ಮೈಸೂರು,ಆ,28,2019(www.justkannada.in): ಮೈಸೂರಿನ ಜೆಎಸ್ಎಸ್ ವೃದ್ಧಾಶ್ರಮದಲ್ಲಿ ನಟ ಡಾಲಿ ಧನಂಜಯ್ ಅವರು ಇಂದು ಮೈಸೂರಿನ ಜೆ.ಎಸ್ ಎಸ್ ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡರು.

ಮೈಸೂರಿನ ಜೆ.ಎಸ್.ಎಸ್ ವೃದ್ಧಾಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಡಾಲಿ ಧನಂಜಯ್ ಮಾತನಾಡಿ, ಕೆಳೆದ ಒಂದು ವಾರದಿಂದ ನನ್ನ ಹುಟ್ಟುಹಬ್ಬದ ಆಚರಣೆ ನಡೆಯುತ್ತಿದೆ. ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳು ನನ್ನ ಹುಟ್ಟುಹಬ್ಬವನ್ನ ವಿನೂತನ ರೀತಿಯಲ್ಲಿ ಆಚರಣೆ ಮಾಡಿದ್ದಾರೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಇದ್ದವಾಗಲೂ ನನ್ನ ಅಭಿಮಾನಿಗಳು ಸಾಕಷ್ಟು ನೆರವು ನೀಡಲು ಮುಂದಾಗಿದ್ದರು. ಅದೇ ರೀತಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ನನಗೆ ಸಹಕಾರವನ್ನ ಸ್ನೇಹಿತರು ನೀಡುತ್ತಿದ್ದಾರೆ ಎಂದರು.

ಈ ನಡುವೆ ಈಗಾಗಲೇ ಸಾಕಷ್ಟು ಚಿತ್ರಗಳು ನನ್ನ ಕೈಯಲ್ಲಿದೆ. ದುನಿಯಾ ವಿಜಯ್ ನಿರ್ದೇಶನದ ಸಲಗ ಚಿತ್ರ ಕೈಮ್ಯಾಕ್ಸ್ ಹಂತ ತಲುಪಿದೆ.ಈಗ ಮೈಸೂರಿನಲ್ಲೇ ದುನಿಯಾ ಸೂರಿ ನಿರ್ದೇಶನದ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಚಿತ್ರಿಕರಣ ನಡೆಯುತ್ತಿದೆ. ಇದನ್ನೆಲ್ಲಾ ಮುಗಿದ ನಂತರ ಡಾಲಿ ಪ್ರೊಡಕ್ಷನ್ಸ್ ಮೂಲಕ ಬಡವ ರಾಕ್ಸಲ್ ಚಿತ್ರ ಶುರುವಾಗಲಿದೆ. ಡಾಲಿ ಮುಂದಿನ ದಿನಗಳಲ್ಲಿ ಜನರಿಗೆ ಸರ್ಪೈಸ್ ನೀಡುವ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದರು.

ಹಾಗಯೇ ಕಂಟೆಂಟ್ ಚೆನ್ನಾಗಿ ಇರುವ ಚಿತ್ರಗಳನ್ನ ಜಗತ್ತಿನಲ್ಲಿ ಯಾವುದೇ ಮೂಲೆಯಲ್ಲಿ ಬೇಕಾದರೂ ಸೇಲ್ ಮಾಡಬಹುದು. ಮುಂದಿನ ದಿನಗಳಲ್ಲಿ ಆ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಅದು ನಡೆಯುತ್ತೆ ಎಂದು ಡಾಲಿ ಧನಂಜಯ್ ತಿಳಿಸಿದರು.

Key words: Dolly Dhananjay- celebrates -birthday – JSS- Old Age Home – Mysore.