ಮೈಸೂರು ದಸರಾ ಮುಗಿದ ಬೆನ್ನಲ್ಲೆ ಮತ್ತೊಂದು ಕಾರ್ಯಕ್ಕೆ ಸಿದ್ಧವಾದ ಗಜಪಡೆ…

ಮೈಸೂರು,ಅ,9,2019(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆ ನಿನ್ನೆ ಯಶಸ್ವಿಯಾಗಿ ಮುಗಿದಿದೆ. ಈ ನಡುವೆ ದಸರಾದಲ್ಲಿ ಪಾಲ್ಗೊಂಡಿದ್ದ ಕ್ಯಾಪ್ಟನ್ ಅರ್ಜುನ  ನೇತೃತ್ವದ ಗಜಪಡೆ ಇದೀಗ ಮತ್ತೊಂದು ಕಾರ್ಯಕ್ಕೆ ಸಿದ್ಧವಾಗಿದೆ.

ದಸರಾ ಮುಗಿದ ಬೆನ್ನಲ್ಲೇ  ಗಜಪಡೆ ಮತ್ತೊಂದು ಕಾರ್ಯಕ್ಕೆ ಸಿದ್ದವಾಗಿವೆ. ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಕಾಣಿಸಿಕೊಂಡಿರುವ ಹುಲಿ ಸೆರೆ ಕಾರ್ಯಾಚರಣೆಗೆ ದಸರಾ ಆನೆಗಳು ಸಿದ್ಧವಾಗಿವೆ. ಹುಲಿ ಕಾರ್ಯಚರಣೆಗಾಗಿ ಮೂರು ಆನೆಗಳನ್ನ ಇಂದೇ ಕಳುಹಿಸಲು ಚಿಂತನೆ ನಡೆಸಲಾಗಿದೆ ಎನ್ನಲಾಗುತ್ತಿದೆ.

ಕಾರ್ಯಚರಣೆಗಳ ರಾಜ ಅಭಿಮನ್ಯು ಜೊತಯಲ್ಲಿ ಕ್ಯಾಪ್ಟನ್ ಅರ್ಜುನ  ಹಾಗೂ ಮತ್ತೊಂದು ಆನೆ ಹುಲಿ ಕಾರ್ಯಾಚರಣೆಗೆ ಹೋಗುವುದು ಬಹುತೇಕ ಖಚಿತ ವಾಗಿದ್ದು, ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದ್ದಾರೆ.

Key words:  mysore dasara- elephants- tiger- oparation