ಕುಸ್ತಿ ಪಟುಗಳ ಮಾಸಾಶನ 500 ರೂಗಳಿಂದ 1000ರೂ.ಗೆ ಏರಿಕೆ‌- ದಸರಾ ಕುಸ್ತಿ ಉದ್ಘಾಟಿಸಿ ಸಿಎಂ ಬಿಎಸ್ ಯಡಿಯೂರಪ್ಪ ಘೋಷಣೆ…

ಮೈಸೂರು,ಸೆ.29,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆಯೋಜಿಸಿರುವ ಕುಸ್ತಿ ಪಂದ್ಯಾವಳಿಯನ್ನ ಸಿಎಂ ಬಿಎಸ್ ಯಡಿಯೂರಪ್ಪ ಉದ್ಘಾಟಿಸಿದರು.

ದಸರಾ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಸಿ, ಸುಮಾರು 3 ಕೋಟಿ ರೂ.ಗಳ  ಪ್ರೇಕ್ಷಕರ ಕುಳಿತು ಕೊಳ್ಳುವ ಮೇಲ್ಛಾವಣಿ ನಿರ್ಮಾಣ ಕಾಮಗಾರಿಗೆ  ಶಂಕು ಸ್ಥಾಪನೆ  ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ನೆರೆವೇರಿಸಿದರು.

ವಸ್ತು ಪ್ರದರ್ಶನದ ಆವರಣದಲ್ಲಿರುವ ಕುಸ್ತಿ ಪಂದ್ಯಾವಳಿಯ ಆವರಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಸಿ ಮಾತನಾಡಿದ  ಸಿಎಂ ಬಿ.ಎಸ್ ಯಡಿಯೂರಪ್ಪ, ಮೈಸೂರು ದಸರಾ ಸಂದರ್ಭ ಕುಸ್ತಿ ಪಂದ್ಯಾವಳಿಯನ್ನು ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ರಾಜಾಶ್ರಯದಲ್ಲಿ ಬೆಳೆದ ಕುಸ್ತಿ ಬಹಳ ಮಹತ್ವನ್ನು ಪಡೆದಿದೆ. ಕುಸ್ತಿ ಪ್ರೋತ್ಸಾಹವಿಲ್ಲದೆ ಸೊರಗಿದೆ. ನಮ್ಮ ಸರ್ಕಾರ ಕುಸ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಈ ವೇಳೆ ಕುಸ್ತಿ ಪಟುಗಳ ಮಾಸಾಶನವನ್ನು 500 ರೂಗಳಿಂದ. 1000ರೂ ಗಳಿಗೆ ಏರಿಕೆ‌ ಮಾಡುವುದಾಗಿ ಘೋಷಣೆ ಮಾಡಿದರು. ಉಳಿಕೆ ಬಾಕಿಯನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಕೆ.ಜಿ ಕೊಪ್ಪಲಿನ ಪೈಲ್ವಾನ್ ಡಿ.ಕರಿಗೌಡ ಅವರು ಕುಸ್ತಿ ಪಂದ್ಯಾವಳಿಯ ಜ್ಯೋತಿನ್ನು ತಂದರು ಆ ಜ್ಯೋತಿಯನ್ನು ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಕುಸ್ತಿ ಪಂದ್ಯಾವಳಿಯ ಆಯೋಜಕರಿಗೆ ನೀಡಿದರು. ಮೊದಲನೆಯ ಕುಸ್ತಿಯು ಕನಕಪುರದ ಸ್ವರೂಪ್ ಗೌಡ ಮತ್ತು ನಜ಼ರ್ ಬಾದ್ ನ ಚೇತನ್ ಗೌಡ  ನಡುವೆ ಹಾಗೂ ಕರಿಯ ವಯಸ್ಸಿನ ಪೈಲ್ವಾನ್ ಮುಖೇಸ್ ಗೌಡ ಮತ್ತು ಶ್ರೇಯಸ್ ನಡುವೆ ಸಮ ಬಲದ ಕುಸ್ತಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ ,ಶಾಸಕರಾದ ನಾಗೇಂದ್ರ ಮಹಾಪೌರಾದ ಪುಷ್ಪಲತಾ ಜಗನ್ನಾಥ್ ಸೇರಿದಂತೆ  ಮತ್ತಿತರರು ಹಾಜರಿದ್ದರು.

ಕುಸ್ತಿ ಪಂದ್ಯಾವಳಿ ಉದ್ಘಾಟನೆ ಮಾಡಿ ಕುಸ್ತಿಪಟುವಿಗಾಗಿ ಕಾದು ನಿಂತ ಸಿಎಂ ಬಿಎಸ್ ವೈ…

ಉದ್ಘಾಟನೆ ಪಂದ್ಯಕ್ಕೆ ಕುಸ್ತಿಪಟು ಸರಿಯಾದ ಸಮಯಕ್ಕೆ ಬಾರದ ಹಿನ್ನೆಲೆ  ಕುಸ್ತಿ ಪಂದ್ಯಾವಳಿ ಉದ್ಘಾಟನೆ ಮಾಡಿ ಸಿಎಂ  ಬಿಎಸ್ ಯಡಿಯೂರಪ್ಪ ಕುಸ್ತಿಪಟುವಿಗಾಗಿ ಕಾದು ನಿಂತ ಪ್ರಸಂಗ ನಡೆಯಿತು.  ಎಷ್ಟೇ ಬಾರಿ ಕರೆಕೊಟ್ಟರು ಕುಸ್ತಿಪಟು ಪಟು ಕಿರಣ್ ಮಟ್ಟಿ ಮೇಲೆ ಬರಲಿಲ್ಲ. ಈ ವೇಳೆ  ಕುಸ್ತಿಪಟುವನ್ನ ಬೇಗ ಕರೆಸಿ ಎಂದು ಶಾಸಕ ನಾಗೇಂದ್ರ ಆಗ್ರಹಿಸಿದರು. ಕುಸ್ತಿಪಟು ಕಿರಣ್  ಬಾರದ ಹಿನ್ನೆಲೆ ಕುಸ್ತಿಪಟು ಗಂಜಾಂ ಮಂಜು ಸುಮಾರು ಅರ್ಧ ಗಂಟೆ ಕಾದು‌ ನಿಂತಿದ್ದರು.  ಕಡೆಗೆ ಮಟ್ಟಿಗೆ ಪೂಜೆ ಮಾಡಿ ಜ್ಯೋತಿ ಹಿಡಿದು ಸಿಎಂ ಯಡಿಯೂರಪ್ಪ ಕಾರ್ಯಕ್ರಮದಿಂದ ಹೊರ ನಡೆದರು.

Key words: mysore dasara- CM BS Yeddyurappa- Wrestling tournament – inauguration