ಅನರ್ಹ ಶಾಸಕರ ಬಗ್ಗೆ ಹೇಳಿಕೆ ಕುರಿತು ಶಾಸಕ ಉಮೇಶ್ ಕತ್ತಿಗೆ ಟಾಂಗ್: ಪರಿಹಾರ ನೀಡಲು ಹಣದ ಕೊರತೆ ಇಲ್ಲ ಎಂದ ಡಿಸಿಎಂ ಲಕ್ಷ್ಮಣ್ ಸವದಿ….

kannada t-shirts

ಬೆಳಗಾವಿ,ಸೆ,29,2019(www.justkannada.in): ಉಪಚುನಾವಣೆಯಲ್ಲಿ ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ ಎಂದು ಅನರ್ಹ ಶಾಸಕರ ಕುರಿತು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಉಮೇಶ್ ಕತ್ತಿಗೆ ಡಿಸಿಎಂ ಲಕ್ಷ್ಮಣ್ ಸವದಿ ಟಾಂಗ್ ನೀಡಿದ್ದಾರೆ.

ಉಪಚುನಾವಣೆಗೆ ಟಿಕೆಟ್ ನೀಡು ವಿಚಾರ ಕುರಿತು ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ. ನಾವು ಹೈಕಮಾಂಡ್ ನಿರ್ಧಾರದಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಹುಕ್ಕೇರಿ ಪಟ್ಟಣದಲ್ಲಿ ಮಾತನಾಡಿದ್ದ ಶಾಸಕ ಉಮೇಶ್ ಕತ್ತಿ, ಉಪಚುನಾವಣೆಯಲ್ಲಿ ಅವರ ದಾರಿ ಅವರಿಗೆ ನಮ್ಮ ದಾರಿ ನಮಗೆ ಬೆಳಗಾವಿಯ ಮೂರು ಕ್ಷೇತ್ರಗಳಲ್ಲಿ ಬಿಜೆಪಿಯವರಿಗೆ ಟಿಕೆಟ್ ಪಕ್ಕಾ ಎಂದಿದ್ದರು.

ಬೆಳಗಾವಿಯಲ್ಲಿ ಇಂದು ಮಾತನಾಡಿದ ಡಿಸಿಎಂ ಲಕ್ಷ್ಮಣ್ ಸವದಿ, ನೆರೆ ಪರಿಹಾರ ನೀಡಲು ನಮಗೆ ಹಣದ ಕೊರತೆ ಇಲ್ಲ.ವಿರೋಧ ಪಕ್ಷದವರು ತೆಗಳಬೇಕು. ಅದು ಅವರ ಕೆಲಸ. ನಾವು ನಮ್ಮ ಕೆಲಸ ಮಾಡುತ್ತೇವೆ. ಈಗಾಗಲೇ ಬೆಳಗಾವಿಗೆ 500 ಕೋಟಿ ರೂ ಬಿಡುಗಡೆ ಮಾಡಿದ್ದೇವೆ.ನಮ್ಮ ಬಳಿ ಇರುವ ಹಣದಲ್ಲಿ ಕೆಲಸ ಆರಂಭಿಸಿದ್ದೇವೆ. ನಂತರ ಕೇಂದ್ರ ಸರ್ಕಾರ ನೆರೆ ಪರಿಹಾರ ನೀಡುತ್ತದೆ ಎಂದರು.

Key words: MLA-Umesh Katti-   DCM Laxman Sawadi -no shortage -money – provide- relief.

website developers in mysore