ಮೈಸೂರು ದಸರಾ-2019: ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ…

ಮೈಸೂರು ಸೆ.29,2019(www.justkannada.in):   ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು  ನಗರದ ಕುಪ್ಪಣ್ಣ ಪಾರ್ಕ್ ನಲ್ಲಿ ದಸರಾ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು.

ಫಲಪುಷ್ಪ ಪ್ರದರ್ಶನದಲ್ಲಿ ಪ್ರಮುಖ ಆಕರ್ಷಣೀಯವಾದ ಶ್ರೀ ಜಯಚಾಮರಾಜ ಒಡೆಯರ್ ರವರ 100ನೇ ಜನ್ಮ ಶತಾಬ್ದಿಯ ಪ್ರಯುಕ್ತ ಬೃಹತ್ ಆಕಾರದ ಗ್ಲಾಸ್ ಹೌಸ್ ನಲ್ಲಿ ಲಕ್ಷಾಂತರ ‌ಹೂಗಳಿಂದ ಶ್ರೀ ಜಯಚಾಮರಾಜ ಒಡೆಯರ್ ರವರ ಮಾದರಿಯನ್ನು ನಿರ್ಮಿಸಿದ್ದು, ಅದನ್ನು‌ ಸಹಾ ಉದ್ಘಾಟಿಸಿ ಮೆಚ್ಚುಗೆ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿ ಸೋಮಣ್ಣ, ಜಿಲ್ಲಾಧಿಕಾರಿ ‌ಅಭಿರಾಮ್.ಜಿ.ಶಂಕರ್, ಜಿಲ್ಲಾ‌ ಪಂಚಾಯತ್ ‌ಮುಖ್ಯಕಾರ್ಯನಿರ್ವಾಹಕಾಧಿಕಾರಿ ಕೆ.ಜ್ಯೋತಿ, ಜಿಲ್ಲಾ ತೋಟಗಾರಿಕಾ ಉಪ‌ನಿರ್ದೇಶಕರಾದ ರುದ್ರೇಶ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಹಬೀಬಾ ನಿಶಾತ್,  ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Key words: Mysore Dasara -2019-flower show- cm bs yeddyurappa