Monday, September 28, 2026

BDA Apartments

ತಾಯಿ ಚಾಮುಂಡೇಶ್ವರಿ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಮೈಸೂರು ಡಿಸಿ ರೋಹಿ...
Home Front Page ತಾಯಿ ಚಾಮುಂಡೇಶ್ವರಿ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ…

ತಾಯಿ ಚಾಮುಂಡೇಶ್ವರಿ ಪಲ್ಲಕ್ಕಿ ರಥ ಎಳೆದು ಹರಕೆ ತೀರಿಸಿದ ಮೈಸೂರು ಡಿಸಿ ರೋಹಿಣಿ ಸಿಂಧೂರಿ…

ಮೈಸೂರು,ಅಕ್ಟೋಬರ್,27,2020(www.justkannada.in): ನಾಡಹಬ್ಬ ಮೈಸೂರು ದಸರಾ ಯಶಸ್ಸಿಗಾಗಿ ಹರಕೆ ಹೊತ್ತಿದ್ದ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಕುಟುಂಬ ಸಮೇತ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.mysore-dasara-chamundeshwari-pallakki-mysore-dc-rohini-sindhuri-harake-chariot

ತಂದೆ, ತಾಯಿ, ಪತಿ ಹಾಗೂ ಮಗುವಿನೊಂದಿಗೆ ತಾಯಿ ಚಾಮುಂಡಿಯ ಪಲ್ಲಕ್ಕಿ ರಥ ಎಳೆದು ಡಿಸಿ  ರೋಹಿಣಿ ಸಿಂಧೂರಿ ಹರಕೆ ತೀರಿಸಿದ್ದಾರೆ. ನಿನ್ನೆ ಜಂಬೂಸವಾರಿ ಮೆರವಣಿಗೆ ಮುಗಿಯುತ್ತಿದ್ದಂತೆ ಸಂಜೆ ಚಾಮುಂಡಿ ಬೆಟ್ಟಕ್ಕೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಕುಟುಂಬ ತೆರಳಿತ್ತು.mysore-dasara-chamundeshwari-pallakki-mysore-dc-rohini-sindhuri-harake-chariot

ಮೈಸೂರು ದಸರಾ ಹೊತ್ತಿನಲ್ಲೇ ರೋಹಿಣಿ ಸಿಂಧೂರಿ ಮೈಸೂರು ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದರು. ನಂತರ  ದಸರಾ ಸುಸೂತ್ರವಾಗಿ ನಡೆಯುವಂತೆ ಆಶಿಸಿ ಡಿಸಿ ರೋಹಿಣಿ ಸಿಂಧೂರಿ ಹರಕೆ ಹೊತ್ತಿದ್ದರು. ಬಳಿಕ 9 ದಿನವೂ ಪಲ್ಲಕ್ಕಿ ರಥ ಎಳೆದು ಡಿಸಿ ರೋಹಿಣಿ ಸಿಂಧೂರಿ ಹರಕೆ ತೀರಿಸಿದ್ದಾರೆ.

Key words: mysore-dasara-Chamundeshwari Pallakki – Mysore DC -Rohini Sindhuri –harake- chariot.