ಏರ್ ಶೋನಲ್ಲಿ ವಾಯುಪಡೆ ಯೋಧರ ಸಾಹಸ ಪ್ರದರ್ಶನ: ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ನೋಡಿ ಕಣ್ತುಂಬಿಕೊಂಡ ಜನರು…

ಮೈಸೂರು,ಅ,2,2019(www.justkannada.in): ಆಗಸದಲ್ಲಿ ಭಾರತೀಯ ವಾಯುಪಡೆ ಯೋಧರ ಸಾಹಸ ಪ್ರದರ್ಶನ, ಹೆಲಿಕ್ಯಾಪ್ಟರ್ ಮೂಲಕ ಮೈದಾನದಲ್ಲಿ ಹೂವಿನ ಮಳೆ, ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ ನೋಡಿ ಪುಳಕಿತರಾದ ಜನರು. ಇದೆಲ್ಲಾ ಕಂಡು ಬಂದಿದ್ದು ಮೈಸೂರಿನಲ್ಲಿ ನಡೆದ ಏರ್ ಶೋನಲ್ಲಿ….

ಹೌದು, ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು ನಗರದ ಪಂಜಿನ ಕವಾಯತು ಮೈದಾನದಲ್ಲಿ ಏರ್ ಶೋ ಆಯೋಜನೆ ಮಾಡಲಾಗಿತ್ತು. ಏರ್ ಶೋ ನೋಡಲು ಬನ್ನಿ ಮಂಟಪದ ಮೈದಾನದ ಸುತ್ತ ಕಿಕ್ಕಿರಿದು ಸೇರಿದ್ದ ಜನರ ಮಧ್ಯೆ ಭಾರತ ಸೇನೆಯಲ್ಲಿ ಘರ್ಜಿಸುವ ಲೋಹದ ಹಕ್ಕಿಗಳು ಮತ್ತು ಚತುರ ವಾಯು ಸೇನಾ ಸಿಬ್ಬಂದಿ ತಮ್ಮ ಅದ್ಬುತವಾದ ಕೌಶಲ್ಯವನ್ನು ಪ್ರದರ್ಶನ ಮಾಡಿದರು.

ವಿಂಗ್ ಕಮಾಂಡ್ ಬಾಳಿಗೆ ಹಾಗೂ ಶ್ರೀ ಕುಮಾರ್ ನೇತೃತ್ವದಲ್ಲಿ ಭಾರತೀಯ ವಾಯುಪಡೆ ಯೋಧರು ತಮ್ಮ ಸಾಹಸ ಪ್ರದರ್ಶನ ಮಾಡಿದರು. ಏರ್ ಡೆವಿಲ್ ಹಾಗೂ ಆಕಾಶಗಂಗಾ ತಂಡ, ಪ್ಯಾರ ಕಮೋಂಡಗಳು ತಮ್ಮ ಸಾಹಸವನ್ನ ಪ್ರದರ್ಶಿಸಿದರು.

ಉಗ್ರರ ಅಡಗುತಾಣಗಳ ವಾಯುಪಡೆ ದಾಳಿ ಬಗ್ಗೆ ಹಾಗೂ ಶತ್ರುಗಳ ಆಕ್ರಮಣ ಎದುರಿಸುವ ಸಾಹಸಮಯ ದೃಶ್ಯವನ್ನ ಏರ್ ಶೋನಲ್ಲಿ ಜನತೆ ಕಣ್ತುಂಬಿಕೊಂಡರು.  ಈ ಮೂಲಕ ಮೈ ಜುಂ ಎನಿಸುವ ಏರ್ ಶೋಗೆ ಜನಮನ್ನಣೆ ಸಿಕ್ಕಿತು. ವಾಯುಪಡೆ ಯೋಧರ ಸಾಹಸಕ್ಕೆ ಪ್ರೇಕ್ಷಕರು ಚಪ್ಪಾಳೆ ಸುರಿಮಳೆಗೈದರು.

Key words: mysore dasara- Air show- people -metal birds – sky.