ಮೂರೇ ದಿನಕ್ಕೆ ಸಚಿವರಿಲ್ಲದೆ ಸೊರಗಿದ ಮೈಸೂರು ದಸರಾ ಕಾರ್ಯಕ್ರಮಗಳು…?

ಮೈಸೂರು,ಅ,1,2019(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಚಾಲನೆ ಸಿಕ್ಕಿ ಕಾರ್ಯಕ್ರಮಗಳು ನಿಗದಿಯಂತೆ ನಡೆಯುತ್ತಿವೆ. ಈ ನಡುವೆ ಮೈಸೂರು ದಸರಾವನ್ನ ಸಚಿವರು ಮರೆತ  ಬಿಟ್ಟಿದ್ದಾರೆಯೇ ಎಂಬ ಪ್ರಶ್ನೆ ಎದ್ದಿದೆ.

ಹೌದು ಮೂರೇ ದಿನಕ್ಕೆ ದಸರಾ ಕಾರ್ಯಕ್ರಮಗಳು ಸಚಿವರಿಲ್ಲದೆ ಸೊರಗಿವೆ. ಮೊದಲನೇ ಹಾಗೂ ಎರಡನೇ ದಿನದ ದಸರಾ ಕಾರ್ಯಕ್ರಮಗಳಿಗೆ ಹಲವು ಸಚಿವರು ಗೈರಾಗಿದ್ದರು. ಇದೀಗ ಮೂರನೇ ದಿನದ ಕಾರ್ಯಕ್ರಮಗಳಿಗೂ ಸಚಿವರು  ಗೈರಾಗಿದ್ದು ದಸರಾ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆಯೇ ಎಂಬ ಅನುಮಾನ ಮೂಡಿದೆ.

ಮೊದಲ ದಿನ ಸಚಿವ ಕೆ.ಎಸ್.ಈಶ್ವರಪ್ಪ ಫಲಪುಷ್ಪ ಪ್ರದರ್ಶನ ಉದ್ಘಾಟಿಸಬೇಕಿತ್ತು.  ಆದರೆ ಅವರು ಗೈರಾಗಿದ್ದರು. ಇನ್ನು ಪೊಲೀಸ್ ಚೌಕಿ ಉದ್ಘಾಟಿಸಬೇಕಿದ್ದ ಸಚಿವ ಬಸವರಾಜ ಬೊಮ್ಮಾಯಿ, ಆಹಾರ ಮೇಳಗೆ ಚಾಲನೆ ನೀಡಬೇಕಿದ್ದ ಸಚಿವ ಹಾಗೂ ಡಿಸಿಎಂ ಸಚಿವ ಅಶ್ವತ್‌ನಾರಾಯಣ್, ಜತೆಗೆ ದಸರಾ ಉದ್ಘಾಟನೆಯಲ್ಲಿ ಭಾಗಿಯಾಗಬೇಕಿದ್ದ ಸಚಿವ ಹಾಗೂ ಡಿಸಿಎಂ ಲಕ್ಷಣ್ ಸವದಿ ಗೈರಾಗಿದ್ದರು.

ಇನ್ನು ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮವನ್ನೆ ಸಿಎಂ ಬಿಎಸ್‌ವೈ ಬಿಟ್ಟು ಹೋಗಿದ್ದರು. ಮಕ್ಕಳ ದಸರಾ ಉದ್ಘಾಟಿಸಬೇಕಿದ್ದ ಸಚಿವ ಸುರೇಶ್ ಕುಮಾರ್ ಗೈರಾಗಿದ್ದರು ಎನ್ನಲಾಗಿದೆ. ಮೂರನೇ ದಿನವೂ ಸಚಿವರು ಗೈರಾಗಿದ್ದಾರೆ.

ಇಂದು ಬೆಳಗ್ಗೆ ಯೋಗವಾಹಿನಿ ಉದ್ಘಾಟಿಸಬೇಕಿದ್ದ ಸಂಸದ ಪ್ರತಾಪ್‌ಸಿಂಹ. ರೈತದಸರಾ ಮೆರವಣಿಗೆಯನ್ನ  ಸಂಸದ ಶ್ರೀನಿವಾಸ್ ಪ್ರಸಾದ್ ಉದ್ಘಾಟಿಸಬೇಕಿತ್ತು. ಹಾಗೆಯೇ ರೈತದಸರಾ ವೇದಿಕೆ ಕಾರ್ಯಕ್ರಮವನ್ನ ಸಚಿವ ಜಗದೀಶ್ ಶೆಟ್ಟರ್ ಉದ್ಘಾಟಿಸಬೇಕಿತ್ತು.

ಇನ್ನು ರೈತ ದಸರಾವನ್ನ ವಸ್ತುಪ್ರದರ್ಶನಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ಚಾಲನೆ ನೀಡಬೇಕಿತ್ತು. ಆದರೆ ಎಲ್ಲ ಕಾರ್ಯಕ್ರಮಗಳಿಗೂ  ಮೈಸೂರು ಉಸ್ತುವಾರಿ ಸಚಿವ ವಿ.ಸೋಮಣ್ಣ ಏಕಾಂಗಿಯಾಗಿ ಓಡಾಡುತ್ತಿದ್ದಾರೆ.

Key words: mysore dasara-2019- program-ministers-absent