Sunday, September 20, 2026

BDA Apartments

ಮಾಜಿ ಶಾಸಕರೊಬ್ಬರ ಕಾರು, ಬಸ್ ಮತ್ತು ಕ್ಯಾಂಟರ್ ನಡುವೆ ಸರಣಿ ಅಪಘಾತ… BDA JK_Adv BDA Adv
Home Crime ಮಾಜಿ ಶಾಸಕರೊಬ್ಬರ ಕಾರು, ಬಸ್ ಮತ್ತು ಕ್ಯಾಂಟರ್ ನಡುವೆ ಸರಣಿ ಅಪಘಾತ….

ಮಾಜಿ ಶಾಸಕರೊಬ್ಬರ ಕಾರು, ಬಸ್ ಮತ್ತು ಕ್ಯಾಂಟರ್ ನಡುವೆ ಸರಣಿ ಅಪಘಾತ….

ಬೆಂಗಳೂರು,ಜ,11,2020(www.justkannada.in): ಮಾಜಿ ಶಾಸಕ ಸೊಗಡು ಶಿವಣ್ಣ ಅವರ ಕಾರು ಮತ್ತು ಕೆಎಸ್ ಆರ್ ಟಿಸಿ ಬಸ್ , ಕ್ಯಾಂಟರ್ ನಡುವೆ ಸರಣಿ ಅಪಘಾತ ಸಂಭವಿಸಿದೆ.

ನೆಲಮಂಗಲ ತಾಲೂಕಿನ ರಾಯರಪಾಳ್ಯ ಬಳಿ ಈ ಘಟನೆ ನಡೆದಿದೆ. ಮಾಜಿ ಶಾಸಕ ತುಮಕೂರಿನ ಸೊಗಡು ಶಿವಣ್ಣ ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್, ಇನ್ನೋವಾ ಕಾರ್ ಮತ್ತು ಕ್ಯಾಂಟರ್ ನಡುವೆ ಅಪಘಾತ ಸರಣಿ ಅಪಘಾತ ಸಂಭವಿಸಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲ.

ಸ್ಥಳದಿಂದ ಕಾರು ತೆಗೆದುಕೊಂಡು ಕಾರು ಚಾಲಕ ಎಸ್ಕೇಪ್ ಆಗಿದ್ದು ಕೆ.ಎಸ್.ಆರ್.ಟಿ.ಸಿ ಚಾಲಕನ ನಿರ್ಲಕ್ಷ್ಯದಿಂದ ಸರಣಿ ಅಪಘಾತ ನಡೆದಿದೆ ಎನ್ನಲಾಗಿದೆ. ಸರಣಿ ಅಪಘಾತದಿಂದಾಗಿ  ಕೆಲ ಹೊತ್ತು ರಾಷ್ಟ್ರೀಯ ಹೆದ್ದಾರಿ 4 ರಲ್ಲಿ‌ ಟ್ರಾಫಿಕ್ ಜಾಂ ಉಂಟಾಯಿತು. ನೆಲಮಂಗಲ ಸಂಚಾರಿ‌ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Key words:  series accidents- between – car- bus – canter – former MLA-car