Tuesday, September 1, 2026

BDA Apartments

Home Crime ಮೈಸೂರು: ಗುತ್ತಿಗೆದಾರನ ಕಿಡ್ನಾಪ್: 16 ಲಕ್ಷ ರೂ ಹಣ, ಚಿನ್ನಾಭರಣ ಕಸಿದು ದುಷ್ಕರ್ಮಿಗಳು ಪರಾರಿ

ಮೈಸೂರು: ಗುತ್ತಿಗೆದಾರನ ಕಿಡ್ನಾಪ್: 16 ಲಕ್ಷ ರೂ ಹಣ, ಚಿನ್ನಾಭರಣ ಕಸಿದು ದುಷ್ಕರ್ಮಿಗಳು ಪರಾರಿ

ಮೈಸೂರು,ಜುಲೈ,18,2026 (www.justkannada.in): ದುಷ್ಕರ್ಮಿಗಳು ಗುತ್ತೆಗದಾರರೊಬ್ಬರನ್ನ ಅಪಹರಿಸಿ ಹಣ ಚಿನ್ನಾಭರಣ ಲೂಟಿ ಪರಾರಿಯಾಗಿರುವ ಘಟನೆ ಮೈಸೂರು ನಗರದ ಹೊರವಲಯದಲ್ಲಿ ನಡೆದಿದೆ.

ಗುತ್ತಿಗದಾರ ರಾಮು ಎಂಬುವವರನ್ನ ನಾಲ್ವರು ದುಷ್ಕರ್ಮಿಗಳು ಅಪಹರಿಸಿ  16 ಲಕ್ಷ ರೂ. ಹಣ,  3.5 ಲಕ್ಷ ರೂ. ಮೌಲ್ಯದ ಚಿನ್ನ ಕಸಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಜುಲೈ 15 ರಂದು ಈ ಘಟನೆ ನಡೆದಿದ್ದು ಈಗ ಬೆಳಕಿಗೆ ಬಂದಿದೆ. ಮೈಸೂರು ತಾಲ್ಲೂಕಿನ ಮುದ್ದೇಗೌಡನ ದೊಡ್ಡಿನ ನಿವಾಸಿಯಾಗಿರುವ ರಾಮು ತೋಟದಿಂದ ಮನೆಗೆ ಹೋಗುವಾಗ ನಾಲ್ವರು ದುಷ್ಕರ್ಮಿಗಳು ಅಪಹರಿಸಿದ್ದಾರೆ. ಬಳಿಕ ರಾತ್ರಿಯಿಡಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಸುತ್ತಾಡಿಸಿದ್ದು ರಾಮು ಅವರಿಗೆ ಹೆಂಡತಿಗೆ ಕರೆ ಮಾಡಿಸಿ ರಾತ್ರಿ ಮನೆಗೆ ಬರುವುದಿಲ್ಲ ಎಂದು ಹೇಳಿಸಿದ್ದಾರೆ. ಬಳಿಕ ಹಣ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Key words: Mysore, Contractor, kidnapped, stealing, cash , jewellery