Wednesday, September 2, 2026

BDA Apartments

Home Front Page ಬೆಂಗಳೂರಿನಲ್ಲಿ ಬಿಡಾಡಿ ವಾಹನಗಳ ಟೋಯಿಂಗ್ ಗೆ ಸಚಿವ ಕೃಷ್ಣಭೈರೇಗೌಡ ಚಾಲನೆ

ಬೆಂಗಳೂರಿನಲ್ಲಿ ಬಿಡಾಡಿ ವಾಹನಗಳ ಟೋಯಿಂಗ್ ಗೆ ಸಚಿವ ಕೃಷ್ಣಭೈರೇಗೌಡ ಚಾಲನೆ

ಬೆಂಗಳೂರು,ಜುಲೈ,18,2026 (www.justkannada.in):  ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ  ರಸ್ತೆಗಳಲ್ಲಿ ಹಾಗೆಯೇ ನಿಂತಲ್ಲೇ ನಿಂತಿರುವ ಬಿಡಾಡಿ ವಾಹನಗಳ ಟೋಯಿಂಗ್ ಗೆ ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣಭೈರೇಗೌಡ ಚಾಲನೆ ನೀಡಿದರು.

ಮಲ್ಲೇಶ್ವರಂನಲ್ಲಿ  ರಸ್ತೆಯಲ್ಲಿ ನಿಂತಲ್ಲೇ ನಿಂತಿರುವ ಅನಾಥ ವಾಹನಗಳ ಎತ್ತಂಗಡಿಗೆ ಸಚಿವ ಕೃಷ್ಣಭೈರೇಗೌಡ ಚಾಲನೆ ನೀಡಿದರು. ಸಚಿವರಿಗೆ ಕಾಂಗ್ರೆಸ್ ನಾಯಕ ದಿನೇಶ್ ಗುಂಡೂರಾವ್ ಸಾಥ್ ನೀಡಿದರು.

ಬಿಡಾಡಿ ವಾಹನಗಳಿಗೆ ತೆರವು ಮಾಡುವಂತೆ ವಾರದ ಹಿಂದೆ ಜಿಬಿಎ ನೋಟಿಸ್ ಅಂಟಿಸಿತ್ತು. ಆದರೆ ಅವುಗಳನ್ನ ತೆರವು ಮಾಡದ ಹಿನ್ನೆಲೆಯಲ್ಲಿ ಇದೀಗ ಟೋಯಿಂಗ್ ಗೆ ಮುಂದಾಗಿದೆ.

Key words: Minister, Krishna Bhairegowda, towing, abandoned, vehicles , Bengaluru