Saturday, September 26, 2026

BDA Apartments

ಸಿದ್ದರಾಮಯ್ಯರ ಜನಪ್ರಿಯತೆಗೆ ಮಸಿ ಬಳಿಯುವ ಸಲುವಾಗಿ ಬಿಜೆಪಿ ಷಡ್ಯಂತ್ರ : ಕಾಂ...
Home Front Page ಸಿದ್ದರಾಮಯ್ಯರ ಜನಪ್ರಿಯತೆಗೆ ಮಸಿ ಬಳಿಯುವ ಸಲುವಾಗಿ ಬಿಜೆಪಿ ಷಡ್ಯಂತ್ರ : ಕಾಂಗ್ರೆಸ್ ಕಾರ್ಪೊರೇಟರ್ ಟೀಕೆ

ಸಿದ್ದರಾಮಯ್ಯರ ಜನಪ್ರಿಯತೆಗೆ ಮಸಿ ಬಳಿಯುವ ಸಲುವಾಗಿ ಬಿಜೆಪಿ ಷಡ್ಯಂತ್ರ : ಕಾಂಗ್ರೆಸ್ ಕಾರ್ಪೊರೇಟರ್ ಟೀಕೆ

 

ಮೈಸೂರು, ನ.04, 2021 : (www.justkannada.in news) : ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಟೀಕಿಸುವ ಯಾವುದೇ ನೈತಿಕತೆ ಬಿಜೆಪಿ ಮುಖಂಡರಿಗೆ ಇಲ್ಲ ಎಂದು ಕಾಂಗ್ರೆಸ್ ಕಾರ್ಪೊರೇಟರ್ ಲೊಕೇಶ್ ವಿ.ಪಿಯಾ ಟೀಕಿಸಿದ್ದಾರೆ.

ಮೈಸೂರಿನ ಕೋರ್ಟ್ ಮುಂಬಾಗದ ಗಾಂಧಿ ಪ್ರತಿಮೆ ಬಳಿ ಇಂದು ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸಿದ ನಗರ ಪಾಲಿಕೆ ಸದಸ್ಯ ಲೊಕೇಶ್ ವಿ.ಪಿಯಾ ಹೇಳಿದಿಷ್ಟು…

ಈ ನಾಡು ಕಂಡ ಶೋಷಿತರ, ದಲಿತರ ಅಭಿವೃದ್ಧಿ ಹರಿಕಾರ ಸಿದ್ದರಾಮಯ್ಯ. ಅವರು ಮುಖ್ಯಮಂತ್ರಿ ಆಗಿದ್ದಾಗ ಎಸ್.ಸಿ ಹಾಗೂ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಬಜೆಟ್ ನಲ್ಲಿ ಅತಿ ಹೆಚ್ಚು ಹಣ ನೀಡುವ ಮೂಲಕ ಹಲವಾರು ಕೊಡುಗೆಗಳನ್ನು ನೀಡಿದ್ದರು. ಈ ಕಾರಣಕ್ಕೆ ದಲಿತರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದು ಬಿಜೆಪಿಯಲ್ಲಿನ ದಲಿತರಿಗೂ ತಿಳಿದಿದೆ. ಈ ಸತ್ಯ ತಿಳಿದಿರುವ ಬಿಜೆಪಿ ಮುಖಂಡರು, ಸಿದ್ದರಾಮಯ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಸಲುವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ. ಅವರ ಈ ಪ್ರಯತ್ನ ಯಾವುದೇ ಕಾರಣಕ್ಕೂ ಯಶಸ್ವಿಯಾಗದು.

ಈ ಕೂಡಲೇ ಬಿಜೆಪಿ ಮುಖಂಡರು, ಸಿದ್ದರಾಮಯ್ಯ ಅವರ ವಿರುದ್ದ ನೀಡುತ್ತಿರುವ ಹೇಳಿಕೆ ನಿಲ್ಲಿಸಿ ಕ್ಷಮೆ ಕೇಳಬೇಕು. ತಪ್ಪಿದಲ್ಲಿ ಬಿಜೆಪಿ ವಿರುದ್ದ ಮತ್ತಷ್ಟು ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 

key words : Mysore-congress-corporation-protest-against-bjp-