Sunday, September 13, 2026

BDA Apartments

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ಧ ಶಾಸಕ ಎಸ್.ಎ ರಾಮದಾಸ್ ರಿಂದ ಸಿಎಂ...
Home Front Page ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ಧ ಶಾಸಕ ಎಸ್.ಎ ರಾಮದಾಸ್ ರಿಂದ ಸಿಎಂ ಬಿಎಸ್ ವೈ ಅವರ...

ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರಗೊಂಡಿದ್ಧ ಶಾಸಕ ಎಸ್.ಎ ರಾಮದಾಸ್ ರಿಂದ ಸಿಎಂ ಬಿಎಸ್ ವೈ ಅವರ ಗುಣಗಾನ…

ಮೈಸೂರು,ಜನವರಿ,23,2021(www.justkannada.in): ಸಚಿವ ಸಂಪುಟ ವಿಸ್ತರಣೆ ವೇಳೆ ತಮಗೆ ಸಚಿವ ಸ್ಥಾನ ಸಿಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಮೈಸೂರಿನ ಕೆ.ಆರ್ ಕ್ಷೇತ್ರದ ಶಾಸಕ ಎಸ್. ಎ ರಾಮದಾಸ್  ಇದೀಗ ಮುಖ್ಯಮಂತ್ರಿ ಬಿಎಸ್  ಯಡಿಯೂರಪ್ಪ ಅವರನ್ನ  ಗುಣಗಾನ ಮಾಡಿದ್ದಾರೆ.action-against -illegal mining- CM BS Yeddyurappa-mysore

ಮೈಸೂರಿನಲ್ಲಿ ನಡೆದ ಅಕ್ಕಮಹಾದೇವಿ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ‘ಅಪರೂಪದ ಮುಖ್ಯಮಂತ್ರಿ’ ಎಂದು ಶಾಸಕ ರಾಮದಾಸ್ ಗುಣಗಾನ ಮಾಡಿದ್ದಾರೆ. ಭಾಷಣದ ವೇಳೆಯೂ ಸಿಎಂ ಯಡಿಯೂರಪ್ಪ ಅವರನ್ನು ಶಾಸಕ ರಾಮದಾಸ್ ಹಾಡಿ ಹೊಗಳಿದ್ದಾರೆ.action-against -illegal mining- CM BS Yeddyurappa-mysore

ರಾಜಕಾರಣಿಗಳಾದಂತಹವರು ಯಾವುದಕ್ಕೂ ಹೆದರಬೇಡಿ ಎಂಬುದನ್ನು ಅಕ್ಕಮಹಾದೇವಿ ಕಳೆದ 800 ವರ್ಷಗಳ ಹಿಂದೆಯೇ ಹೇಳಿದ್ದಾರೆ. ನನ್ನಂತಹವರಿಗೆ ಕೂಡ ಅಧಿಕಾರದ ಆಸೆ, ಭ್ರಮೆ ಇರಬಾರದು ಎಂದು ಅಕ್ಕಮಹಾದೇವಿ ಹೇಳಿದ್ದಾರೆ. ನನಗೂ ಶಾಸಕನಾಗಬೇಕು, ಮಂತ್ರಿಯಾಗಬೇಕೆಂಬ ಭ್ರಮೆಯಿಲ್ಲ. ಇದಕ್ಕೆ ಅಕ್ಕಮಹಾದೇವಿನಅವರ ಸಂದೇಶ ವಿಚಾರಧಾರೆಗಳು ಕಾರಣವಾಗಿವೆ ಎಂದು ಹೇಳುವ ಮೂಲಕ ಶಾಸಕ ರಾಮದಾಸ್ ಎಲ್ಲರನ್ನು ಅಚ್ಚರಿಗೊಳಿಸಿದರು.

Key words: mysore- CM BS Yeddyurappa- SA Ramadas- Praise