Wednesday, July 29, 2026

BDA Apartments

Home Crime ಸಾಕು ಪ್ರಾಣಿಗಳ ಕೊಂಬು ಸಂಗ್ರಹಣೆ ಮಾಡಿದ್ದ ಗೋದಾಮಿನ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ ಪಾಲಿಕೆ...

ಸಾಕು ಪ್ರಾಣಿಗಳ ಕೊಂಬು ಸಂಗ್ರಹಣೆ ಮಾಡಿದ್ದ ಗೋದಾಮಿನ ಮೇಲೆ ದಾಳಿ ನಡೆಸಿ ದಂಡ ವಿಧಿಸಿದ ಪಾಲಿಕೆ ಅಧಿಕಾರಿಗಳು…

ಮೈಸೂರು,ಮಾ,18,2020(www.justkannada.in): ಅನಧಿಕೃತವಾಗಿ ಸಾಕುಪ್ರಾಣಿಗಳ ಕೊಂಬು ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಗೋದಾಮಿನ ಮೇಲೆ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ದಾಳಿ ನಡೆಸಿ ಮಾಲೀಕನಿಗೆ ದಂಡ ವಿಧಿಸಿದ್ದಾರೆ.

ಮೈಸೂರು ಮಹಾನಗರ ಪಾಲಿಕೆ, ಪಶು ಅಧಿಕಾರಿಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಮೈಸೂರಿನ ಬಿಎಂಶ್ರೀ ನಗರದಲ್ಲಿ ಅಕ್ರಂ ಎಂಬುವವರು ‌ ಅನಧಿಕೃತವಾಗಿ ಗೋದಾಮು ಓಪನ್ ಮಾಡಿದ್ದರು. ಗೋದಾಮಿನಲ್ಲಿ  ಸಾಕು ಪ್ರಾಣಿಗಳ ಕೊಂಬುಗಳನ್ನ ಸಂಗ್ರಹಣೆ ಮಾಡಿದ್ದರು. ಯಾವುದೇ ಪರವಾನಗಿ ಪಡೆಯದೆ ಕೊಂಬು ಉತ್ಪನ್ನ ತಯಾರಿ ಮಾರಾಟ ಮಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ತಂಡ ಗೋದಾಮಿನ ಮೇಲೆ ದಾಳಿ ನಡೆಸಿ, ಕೊಂಬುಗಳಿಂದ ತಯಾರಿಸಿದ ಬಾಚಣಿಗೆ, ಬಟನ್ಸ್, ಆಟಿಕೆ ವಸ್ತುಗಳನ್ನ ವಶಪಡಿಸಿಕೊಂಡಿದೆ. ಹಾಗೆಯೇ  ಗೋದಾಮು ಮಾಲೀಕ ಅಕ್ರಂಗೆ ಅಧಿಕಾರಿಗಳು ಹತ್ತು ಸಾವಿರ ರೂ ದಂಡ ವಿಧಿಸಿದ್ದಾರೆ.

Key words: mysore- city corporation- officer- pet –horn- Warehouse-fine