Friday, September 25, 2026

BDA Apartments

Home Front Page ಇಂದಿನಿಂದ ಮೈಸೂರು -ಚೆನ್ನೈ ವಿಮಾನ ಹಾರಾಟ ಆರಂಭ.

ಇಂದಿನಿಂದ ಮೈಸೂರು -ಚೆನ್ನೈ ವಿಮಾನ ಹಾರಾಟ ಆರಂಭ.

ಮೈಸೂರು,ಆಗಸ್ಟ್,13,2021(www.justkannada.in): ಉಡಾನ್ ಯೋಜನೆಯಡಿ ಇಂದಿನಿಂದ ಮೈಸೂರು –ಚೆನ್ನೈ ನಡುವೆ ವಿಮಾನ ಹಾರಾಟ ಆರಂಭವಾಗಲಿದೆ.

ವಾರದಲ್ಲಿ ಮೂರು ದಿನ  ಅಂದರೆ ಸೋಮವಾರ ,ಬುಧವಾರ, ಮತ್ತು ಶುಕ್ರವಾರ ದಂದು ಮೈಸೂರು- ಚೆನ್ನೈ ನಡುವೆ ಇಂಡಿಗೋ ವಿಮಾನ ಹಾರಾಟ ಮಾಡಲಿದೆ. ಸಂಜೆ 4.35 ರಿಂದ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಇಂಡಿಗೋ ವಿಮಾನ ಹೊರಟು ಚೆನ್ನೈಗೆ ಪ್ರಯಾಣ ಬೆಳೆಸಲಿದೆ.

ಹಾಗೆಯೇ ಮಧ್ಯಾಹ್ನ 2.50 ಕ್ಕೆ ಚೆನೈ ವಿಮಾನ ನಿಲ್ದಾಣ ದಿಂದ ಹೊರಡುವ ವಿಮಾನ ಸಂಜೆ 4.15 ಕ್ಕೆ ಮೈಸೂರು ತಲುಪಲಿದೆ.

Key words: Mysore-Chennai -airport –start – flight-today