Saturday, August 22, 2026

BDA Apartments

Home Crime ಮೈಸೂರಿನ ಸಿಸಿಬಿ ಪೋಲಿಸರ ಭರ್ಜರಿ ಬೇಟೆ: ಕುಖ್ಯಾತ 10 ಮಂದಿ ಸರಗಳ್ಳರ ಬಂಧನ.

ಮೈಸೂರಿನ ಸಿಸಿಬಿ ಪೋಲಿಸರ ಭರ್ಜರಿ ಬೇಟೆ: ಕುಖ್ಯಾತ 10 ಮಂದಿ ಸರಗಳ್ಳರ ಬಂಧನ.

ಮೈಸೂರು,ಸೆಪ್ಟಂಬರ್,30,2022(www.justkannada.in): ಮೈಸೂರಿನ ಸಿಸಿಬಿ ಪೋಲಿಸರು ಭರ್ಜರಿ  ಕಾರ್ಯಾಚರಣೆ ನಡೆಸಿ ಕುಖ್ಯಾತ 10  ಮಂದಿ ಸರಗಳ್ಳರನ್ನ ಬಂಧಿಸಿದ್ದಾರೆ.

ಮೈಸೂರು ಮತ್ತು ಚಾಮರಾಜನಗರದ ಒಟ್ಟು 10 ಸರಗಳ್ಳರನ್ನ ಹೆಡೆಮುರಿ ಕಟ್ಟಲಾಗಿದೆ. ಬಂಧಿತರಿಂದ ಸುಮಾರು 50  ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. 1ಕೆ.ಜಿ ತೂಕದ 25 ಚಿನ್ನದ ಸರಗಳು, ಇತರೆ ಚಿನ್ನಾಭರಣಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮೈಸೂರಿನಲ್ಲಿ ಸರಗಳ್ಳತ ಆಗುತ್ತಿದ್ದ ಹಿನ್ನಲೆ. ವಿಶೇಷ ತಂಡ ರಚಿಸಿ ಪೋಲಿಸರು ಕಾರ್ಯಾಚರಣೆ ನಡೆಸಿದ್ದರು. ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ಒಟ್ಟು ಸುಮಾರು ೨೫  ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಖದೀಮರು ಭಾಗಿಯಾಗಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಮೈಸೂರು ನಗರ ಪೋಲಿಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.

Key words: Mysore- CCB-police – Arrest – 10 notorious thieves.