ಪಾಕಿಸ್ತಾನ, ಚೀನಾ ಬಾಂಗ್ಲಾ ಗಡಿಯಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.

ಬೆಂಗಳೂರು,ಸೆಪ್ಟಂಬರ್,30,2022(www.justkannada.in): ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಬಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿರುವ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ, ಭಾರತ ಜೋಡೋ ಯಾತ್ರೆ ಮಾಡುತ್ತಿದ್ದೀರಾ  ಅಥವಾ ಭಾರತ್ ತೋಡೋ ಯಾತ್ರೆ ಮಾಡುತ್ತಿದ್ದೀರಾ…? ಎಂದು ಪ್ರಶ್ನಿಸಿದರು.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯಾತ್ರೆ ಮಾಡಿ.  ಪಾಕಿಸ್ತಾನ, ಚೀನಾ ಬಾಂಗ್ಲಾ ಗಡಿಯಲ್ಲಿ ಭಾರತ್ ಜೋಡೋ ಯಾತ್ರೆ ಮಾಡಿ. ಕಾಂಗ್ರೆಸ್ ಮಾನಸಿಕ ಸ್ಥಿಮಿತ ಕಳೆದುಕೊಂಡಿದೆ. ದೋಣಿಗೆ ನಾಯಕನಿಲ್ಲದ ಪಕ್ಷ ಕಾಂಗ್ರೆಸ್  ಎಂದು ಟೀಕಿಸಿದರು.

Key words: Bharat Jodo Yatra – border – Pakistan- China Union Minister -Shobha Karandlaje.