ದೆಹಲಿಯಲ್ಲಿ ನಡೆದ ಕಿಕ್ ಬಾಕ್ಸಿಂಗ್’ ಸ್ಪರ್ಧೆಯಲ್ಲಿ ಚಿನ್ನದ ಪದಕಗಳಿಗೆ ಕೊರಳಿಡಿದ್ದ ಮೈಸೂರಿನ ಬಾಲ ಪ್ರತಿಭೆ

ಮೈಸೂರು, ಫೆಬ್ರವರಿ 16, 2020 (www.justkannada.in): ದೆಹಲಿಯಲ್ಲಿ ನಡೆದ ವಕೊ ಇಂಡಿಯನ್ ಒಪನ್ ಇಂಟರ್ ನ್ಯಾಷಿನಲ್ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗಿಯಾಗಿದ್ದ ಮೈಸೂರಿನ ಸಾಮ್ಯಥ್. ವೈ. ಎರಡು ಚಿನ್ನದ ಪದಕ ಗೆದ್ದಿದ್ದಾರೆ.

12 ವರ್ಷದ ಸಾಮ್ಯಥ್ ಅಂತರ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ನಲ್ಲಿ 2 ಚಿನ್ನದ ಪದಕ ಬೇಟೆಯಾಡಿದ್ದಾನೆ. ಮೈಸೂರಿನ ಶ್ರೀರಾಂಪುರ ನಿವಾಸಿ ಯೋಗೇಶ್ ಎಲ್.ಎಸ್. ಹಾಗೂ ರಮ್ಯಶ್ರೀ ದಂಪತಿಯ ಪುತ್ರ ಸಾಮ್ಯಥ್. ದೆಹಲಿಯಲ್ಲಿ 6 ದಿನಗಳ ಕಾಲ ನಡೆದಿದ್ದ ಪಂದ್ಯಾವಳಿ ಪಾಲ್ಗೊಂಡಿದ್ದರು.

ಎರಡೆರು ವಿಭಾಗದಲ್ಲಿ ಭಾಗವಹಿಸಿದ್ದ ಮೈಸೂರಿನ ಪ್ರತಿಭೆ ಸಾಮ್ಯಥ್ ಜಯದ ನಗೆ ಬೀರಿದ್ದಾರೆ. ಒಲಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎಂಬ ಕನಸ್ಸನ್ನು ಹೊಂದಿದೆ ಬಾಲ ಪ್ರತಿಭೆ.

ತನ್ನ 4 ನೇ ವಯಸ್ಸಿಗೆ ಕಿಕ್ ಬಾಕ್ಸಿಂಗ್ ಗೆ ಸೇರಿದ್ದ ಸಾಮ್ಯಥ್. ಸತತ ಪ್ರಯತ್ನದಿಂದ ಅಂತರ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಪದಕ ಗಳಿಸಿದ್ದಾರೆ. ಭಾರತದ ಕಿಕ್ ಬಾಕ್ಸಿಂಗ್ ಕಲಿ ಕನ್ನಡಿಗ ಗಿರೀಶ್ ಗೌಡ ಪ್ರೇರಣೆಯಿಂದ ಕಿಕ್ ಬಾಕ್ಸಿಂಗ್ ಕಡೆ ಒಲವು ಗಳಿಸಿದ್ದರು. ಸಂಸತ್ತು ಅದಿವೇಶನದ ನಡುವೆಯೂ ಪಾರ್ಲಿಮೆಂಟ್ಗೆ ಕರೆಸಿದ ಕೇಂದ್ರ ಸಚಿವ ಸದಾನಂದ ಗೌಡ ಹಾಗೂ ಸಂಸದ ಪ್ರತಾಪ್ ಸಾಮ್ಯಥ್ ಅಭಿನಂದನೆ ಸಲ್ಲಿಸಿದರು.