ಶಾಸಕ ರಾಮದಾಸ್ ಆರೋಗ್ಯ ವಿಚಾರಿಸಿದ ಸಚಿವ ಎಸ್.ಟಿ‌.ಸೋಮಶೇಖರ್

ಮೈಸೂರು, ಫೆಬ್ರವರಿ 16, 2020 (www.justkannada.in): ಸಹಕಾರ ಸಚಿವ ಎಸ್.ಟಿ‌.ಸೋಮಶೇಕರ್ ಇಂದು ಶಾಸಕ ರಾಮದಾಸ್ ಆರೋಗ್ಯ‌ ವಿಚಾರಿಸಿದರು.

ಇತ್ತೀಚಿಗೆ ರಾಮದಾಸ್ ಅವರು ಅನಾರೋಗ್ಯಕ್ಕೆ ಒಳಗಾಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರು ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.

ಚಾಮುಂಡಿ ಬೆಟ್ಟಕ್ಕೆ ಭೇಟಿ: ಸಚಿವ‌ ಎಸ್ ಟಿ ಸೋಮಶೇಖರ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ನಾಡದೇವತೆ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು.

ಸಚಿವರಾದ ನಂತರ ಮೊದಲ‌ ಬಾರಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಸಚಿವರು ವಿಶೇಷ ಪೂಜೆ ಸಲ್ಲಿಸಿದರು. ಹಿಂದೆ ಅನರ್ಹರಾಗಿದ್ದ ವೇಳೆ ಚಾಮುಂಡೇಶ್ವರಿ ಮೊರೆ ಹೋಗಿದ್ದ ಎಸ್ ಟಿ ಸೋಮಶೇಖರ್.

ಸಿಎಂಗೆ ಎಲ್ಲ ಗೊತ್ತಿದೆ; ಅರಣ್ಯ ಸಚಿವ ಆನಂದ್ ಸಿಂಗ್ ಕೇಸ್ ಇರುವ ಆರೋಪ ವಿಚಾರಕ್ಕೆ ಮೈಸೂರಿನಲ್ಲಿ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯೆ ನೀಡಿ, ಆನಂದ್ ಸಿಂಗ್ ಬಗ್ಗೆ ಸಿಎಂಗೆ ಎಲ್ಲಾ ಗೊತ್ತಿದೆ. ಅವರ ಎಲ್ಲ ವಿಚಾರದ ಬಗ್ಗೆ ಮಾಹಿತಿ ಇದೆ. ಮಂತ್ರಿ ಆದ ತಕ್ಷಣ ಪ್ರಕರಣಗಳನ್ನ ಮುಚ್ಚಿಹಾಕಲು ಸಾಧ್ಯವಿಲ್ಲ. ಮುಚ್ಚಿಹಾಕಿದ್ರೆ ಅಧಿಕಾರಿಗಳಿಗೆ ತೊಂದ್ರೆ ಆಗುತ್ತೆ, ಇದೆಲ್ಲಾ ಸಾಧ್ಯವಾಗೋಲ್ಲ ಬಿಡಿ ಎಂದು ಹೇಳಿದರು.