ಬರ್ತ್ ಡೇ ದಿನವೂ ಕಾಯಕ ! ಅಭಿಮಾನಿಗಳೊಂದಿಗೆ ಚಾಲೆಂಜಿಂಗ್ ಸ್ಟಾರ್ ಜನ್ಮ ದಿನದ ಸಂಭ್ರಮ

ಬೆಂಗಳೂರು, ಫೆಬ್ರವರಿ 16, 2020 (www.justkannada.in): ಬರ್ತಡೇ ದಿನವೂ ಕಾಯಕವೇ ಕೈಲಾಸ ಎಂದು ನಟ ದರ್ಶನ್ ಹೇಳಿದ್ದಾರೆ.

ಇಂದು ಚಾಲೆಂಜಿಂಗ್ ಸ್ಟಾರ್ ಬರ್ತ್ ಡೇ ಸಂಭ್ರಮದಲ್ಲಿದ್ದು, ಅದೇ ದಿನವೇ ರಾಬರ್ಟ್ ಡಬ್ಬಿಂಗ್ ಮಾಡಲಿದ್ದಾರೆ. ಇಂದು ಎರಡು ಮೂರು ಗಂಟೆಗಳ ಕಾಲ ರಾಬರ್ಟ್ ಡಬ್ಬಿಂಗ್ ನಲ್ಲಿ ಭಾಗಿಯಾಗಲಿದ್ದಾರೆ ದರ್ಶನ್.

ಪ್ರತಿವರ್ಷ ಸಹ ಬರ್ತಡೇ ದಿನ ಡಬ್ಬಿಂಗ್ ಅಥವಾ ಸಿನಿಮಾ ಕೆಲಸದಲ್ಲಿ ಭಾಗಿಯಾಗಿ ದರ್ಶನ್. ಹುಟ್ಟು ಹಬ್ಬದ ಖುಷಿ ಹಂಚಿಕೊಂಡರು. ಪ್ರತಿವರ್ಷದಂತೆ ಈ ವರ್ಷವೂ ಇದೆ. ಅಭಿಮಾನಿಗಳು ಬರ್ತಿದ್ದಾರೆ, ಬಂದಿದ್ದಾರೆ. ಮೊಲ, ಬಾತು ಕೋಳಿ ಗಿಫ್ಟ್ ತಂದಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಕೇಕ್ ಇಲ್ಲ- ಎಲ್ಲಾ ನೀಟಾಗಿದೆ ಎಂದು ಹೇಳಿದರು.

ಇವ್ರು ಕೊಡೋ ದವಸ ಧಾನ್ಯಗಳು ಸಾಕಷ್ಟು ಜನ್ರಿಗೆ ಉಪಯೋಗ ಆಗ್ತಿದೆ. ಅಭಿಮಾನಿಗಳು ಕೊಟ್ಟ ಈ
ದಾನ ಮನೆ ತುಂಬುತ್ತಿದೆ ಎಂದ ದರ್ಶನ್ ರಾಬರ್ಟ್ ಟೀಸರ್ ನಲ್ಲಿ ನೀವು ಈಗ ನೋಡಿರೋದು 10% ಮಾತ್ರ ರಾಜವೀರ ಮದಕರಿ ಶೂಟಿಂಗ್ ಶುರುವಾಗಿದೆ ಮುಂದೆ ಹೇಳ್ತಿನಿ ಎಂದು ಹೇಳಿದರು.