Friday, September 18, 2026

BDA Apartments

ಎಂಎಲ್ಸಿ ಸ್ಥಾನ ಅವರ ಅಪ್ಪನ ಮನೆದಾ ಬಿಕ್ಷೆ : ವಿಶ್ವನಾಥ್ ಕೆಂಡಾಮಂಡಲ..? BDA JK_Adv BDA Adv
Home Front Page ಎಂಎಲ್ಸಿ ಸ್ಥಾನ ಅವರ ಅಪ್ಪನ ಮನೆದಾ ಬಿಕ್ಷೆ : ವಿಶ್ವನಾಥ್ ಕೆಂಡಾಮಂಡಲ..?

ಎಂಎಲ್ಸಿ ಸ್ಥಾನ ಅವರ ಅಪ್ಪನ ಮನೆದಾ ಬಿಕ್ಷೆ : ವಿಶ್ವನಾಥ್ ಕೆಂಡಾಮಂಡಲ..?

 

ಮೈಸೂರು, ಜೂ.19, 2021 : (www.justkannada.in news ) ಬಿಜೆಪಿ ನಾಯಕರ ವಿರುದ್ಧ ಮತ್ತೆ ಗುಡುಗಿದ ಹಳ್ಳಿ ಹಕ್ಕಿ. ಬಿಜೆಪಿ ಸರ್ಕಾರ ನಮ್ಮ ತ್ಯಾಗದಿಂದ ಬಂದಿದೆ. ನಮ್ಮ ಮರ್ಜಿಯಲ್ಲಿ ಅವರಿದ್ದಾರೆ, ನಾವಲ್ಲ.

jk

ಬಿಜೆಪಿ ಎಂಎಲ್ಸಿ ಅಡಗೂರು ಎಚ್.ವಿಶ್ವನಾಥ್ ಅವರ ಇತ್ತೀಚಿನ ಹೇಳಿಕೆಗಳ ಬಗ್ಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿತ್ತು. ವಿಶ್ವನಾಥ್ ಅವರಿಗೆ ಪಕ್ಷದ ತತ್ವ, ಸಿದ್ಧಾಂತ ಗೊತ್ತಿಲ್ಲ. ಅವರ ದೇಹದಲ್ಲಿನ್ನು ಕಾಂಗ್ರೆಸ್ ರಕ್ತವೇ ಹರಿಯುತ್ತಿದೆ. ಆದ್ದರಿಂದಲೇ ಪಕ್ಷದ ಹಾಗೂ ಪಕ್ಷದ ಮುಖಂಡರ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಆ ಮೂಲಕ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ. ಇದು ಹೀಗೆ ಮುಂದುವರೆದಲ್ಲಿ ವಿಶ್ವನಾಥ್ ಅವರಿಗೆ ತೊಂದರೆ ಎಂದು ಎಚ್ಚರಿಸಲಾಗಿತ್ತು.

mysore-dc-does-not-power-spend-10-paise-all-power-vijayendra-mlc-h-vishwanath

ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸನ್ ಟ್ರೇಟರ್ ವಿತರಣೆ ಸಮಾರಂಭದಲ್ಲಿ ಭಾಗವಹಿಸಿದ್ದ ಎಂಎಲ್ಸಿ ವಿಶ್ವನಾಥ್ ಬಳಿಕ ಮಾಧ್ಯಮದವರ ಜತೆ ಪ್ರತಿಕ್ರಿಯಿಸಿದ್ದು ಹೀಗೆ..

ಸರ್ಕಾರದಲ್ಲಿ ಸಚಿವರು ಹಾಗೂ ನಿಗಮ ಮಂಡಳಿ ಅಧ್ಯಕ್ಷರು ಆಗಿರುವವರು ನಮ್ಮ ತ್ಯಾಗದಿಂದ. ಎಂಎಲ್ ಸಿ ಸ್ಥಾನ ನನಗೆ ಭಿಕ್ಷೆ ಎಂದು ಹೇಳುವವರು ಏನು ಅವರಪ್ಪನ ಮನೆಯಿಂದ ತಂದು ಕೊಟ್ಟಿದ್ದರಾ? ಎಂದು ಹರಿಹಾಯ್ದರು.

 

key words : mysore-bjp-vishwanath-mlc-karnataka