ಸರ್ಕಾರಿ ಅಧಿಕಾರಿಯಿಂದ ಪತ್ನಿ ಕೊಲೆ ಯತ್ನ ಆರೋಪ ಪ್ರಕರಣ: ಪತ್ನಿ ಚಿಕಿತ್ಸೆ ಫಲಿಸದೆ ಸಾವು…

ಮೈಸೂರು,ಮಾ,9,2020(www.justkannada.in):  ಸರ್ಕಾರಿ ಅಧಿಕಾರಿಯಿಂದ ಪತ್ನಿ ಕೊಲೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿ ನಾಗವೇಣಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಮಾರ್ಚ್ 3 ರಂದು ಮೈಸೂರು ತಾಲ್ಲೂಕಿನ ಸೋಮನಾಥನಗರದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟ್ಟಪ್ಪ  ತನ್ನಪತ್ನಿ ನಾಗವೇಣಿಯನ್ನ ಕೊಲೆ ಮಾಡಲು ಯತ್ನಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ನಡುವೆ ಹಲ್ಲೆಗೊಳಗಾಗಿದ್ದ ಪತ್ನಿ ನಾಗವೇಣಿ ಅವರನ್ನ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಹಾಗೆಯೇ ಪತಿ ವೆಂಕಟಪ್ಪ ವಿರುದ್ದ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್ನು ಆಸ್ಪತ್ರೆಗೆ ದಾಖಲಾಗಿದ್ದ  ಪತ್ನಿ ನಾಗವೇಣಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Key words: mysore- -attempted -murder – wife -death