ಚಂದನದಲ್ಲೂ ಟ್ಯಾಲೆಂಟ್ ಹಂಟ್ ! ‘ಗಾನ ಚಂದನ’ ರಿಯಾಲಿಟಿ ಷೋ

ಬೆಂಗಳೂರು, ಮಾರ್ಚ್ 09, 2020 (www.justkannada.in): ದೂರದರ್ಶನ ಚಂದನ ವಾಹಿನಿಯಲ್ಲೂ ‘ಗಾನ ಚಂದನ’ ರಿಯಾಲಿಟಿ ಷೋಗೆ ತಯಾರಿ ನಡೆಸಲಾಗುತ್ತಿದೆ.

ಇದರ ಹೊಣೆಯನ್ನು ಖ್ಯಾತ ಗಾಯಕಿ ಬಿ.ಆರ್.ಛಾಯಾ ಹಾಗೂ ಹಿರಿಯ ನಿರ್ದೇಶಕ, ಸಂಗೀತ ನಿರ್ದೇಶಕ, ಸಾಹಿತಿ ವಿ.ಮನೋಹರ್ ಅವರು ವಹಿಸಿಕೊಂಡಿದ್ದು ಈಗಾಗಲೇ ರಾಜ್ಯದಾದ್ಯಂತ ಆಡಿಷನ್‍ಗಳು ನಡೆಸಿ ಅರ್ಹರ ಗಾಯಕ, ಗಾಯಕಿಯರನ್ನು ಆಯ್ಕೆ ಮಾಡಲಾಗಿದೆ.

ಗಾನ ಚಂದನ ಇದೇ ಗುರುವಾರದಿಂದ ಯುವ ಗಾಯಕ, ಗಾಯಕಿಯರ ನಡುವೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಬಿ.ಆರ್. ಛಾಯಾ ಅವರ ಏಳಿಗೆಗೆ ಸದಾ ಬೆನ್ನೆಲುಬಾಗಿ ನಿಂತಿರುವ ಅವರ ಪತಿ ಪದ್ಮಪಾಣಿ ಅವರು ಈ ಕಾರ್ಯಕ್ರಮಕ್ಕಾಗಿ 30 ಚಿಲ್ಲೆಗಳಲ್ಲಿ ಪ್ರಯಾಣ ಮಾಡಿ 18-35 ವಯಸ್ಸಿನೊಳಗಿನ ಎಲ್ಲಾ ಜಿಲ್ಲೆಗಳಿಂದಲೂ 30-40 ಪ್ರತಿಭೆಗಳನ್ನು ಆರಿಸಿ ತಂದಿದ್ದಾರೆ.